ಇನ್ನುಳಿದ 3 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಸ್ಥಾನವನ್ನು ಕೆಎಲ್ ರಾಹುಲ್ ತುಂಬಬಲ್ಲರು: ಗ್ಲೇನ್ ಮೆ‌ಗ್ರಾತ್

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಕೊನೆಗೊಂಡಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಬೌಲಿಂಗ್ ಮಾಡಿ 8 ವಿಕೆಟ್‌ಗಳಿಂದ ಜಯಗಳಿಸಿತು.

Published: 20th December 2020 11:44 PM  |   Last Updated: 21st December 2020 12:01 AM   |  A+A-


Kohli-kl Rahul

ಕೊಹ್ಲಿ-ಕೆಎಲ್ ರಾಹುಲ್

Posted By : Vishwanath S
Source : UNI

ಅಡಿಲೇಡ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಕೊನೆಗೊಂಡಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಬೌಲಿಂಗ್ ಮಾಡಿ 8 ವಿಕೆಟ್‌ಗಳಿಂದ ಜಯಗಳಿಸಿತು. 

ಪಂದ್ಯದ ನಂತರ, ವಿರಾಟ್ ಕೊಹ್ಲಿ ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯ ಹತ್ತಿರ ಇರಲು ಸ್ವದೇಶಕ್ಕೆ ಮರಳುತ್ತಾರೆ. ವಿರಾಟ್ ಕೊಹ್ಲಿ ಇಲ್ಲದ ಮೂರು ಟೆಸ್ಟ್ ಪಂದ್ಯಗಳಿಗೆ ಬದಲಿಯಾಗಿ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ಘೋಷಿಸಿದೆ. ಆದರೆ, ಗಾಯದಿಂದ ಚೇತರಿಸಿಕೊಳ್ಳಲು ವಿಳಂಬವಾಗಿದ್ದರಿಂದ ಅವರು ಆರಂಭಿಕ ಎರಡು ಪಂದ್ಯಗಳಿಗೆ ವಂಚಿತರಾಗಿದ್ದರು.

ಪರಿಣಾಮವಾಗಿ, ಅವರು 26ರಂದು ಪ್ರಾರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ವಿರಾಟ್ ಕೊಹ್ಲಿ ಅವರು ಉಳಿದಿರುವ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಭಾರತವು ಪ್ರತಿಭಾವಂತ ಆಟಗಾರನನ್ನು ಹೊಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಗ್ಲೆನ್ ಮೆ‌ಗ್ರಾತ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅಂತಹ ಪ್ರಭಾವಶಾಲಿ ಆಟಗಾರ. ಆತನಿಲ್ಲದಿದ್ದರೆ ತಂಡಕ್ಕೆ ದೊಡ್ಡ ಹಿನ್ನಡೆ. ಆದರೆ ಅದೇ ಸಮಯದಲ್ಲಿ ಅದು ಇತರ ಆಟಗಾರರಿಗೆ ಕೈ ಎತ್ತುವ ಅವಕಾಶವನ್ನು ನೀಡುತ್ತದೆ ಎಂದು ಮೆಕ್‌ಗ್ರಾತ್ ಹೇಳಿದರು. 

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಕೆಎಲ್ ರಾಹುಲ್ ಅವರನ್ನು ಕೊಹ್ಲಿಯ ಬದಲಿಯಾಗಿ ಹೆಸರಿಸಿದ್ದಾರೆ. ವಿರಾಟ್ ಕೊಹ್ಲಿಗಾಗಿ ಕೆಎಲ್ ರಾಹುಲ್ ಬರಬಹುದು ಎಂದು ಅವರು ಹೇಳಿದರು.


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp