ಮುಂಬೈ ಕ್ಲಬ್ ಮೇಲೆ ಪೊಲೀಸರ ದಾಳಿ: ಕೋವಿಡ್ ನಿಯಮ ಉಲ್ಲಂಘನೆ, ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿ 34 ಮಂದಿ ಬಂಧನ

ಕೋವಿಡ್-19 ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸುತ್ತಿದ್ದ ಕ್ಲಬ್ ವೊಂದರ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ 34 ಮಂದಿಯನ್ನು ಬಂಧಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 
ಸುರೇಶ್ ರೈನಾ
ಸುರೇಶ್ ರೈನಾ

ಮುಂಬೈ: ಕೋವಿಡ್-19 ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸುತ್ತಿದ್ದ ಕ್ಲಬ್ ವೊಂದರ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ 34 ಮಂದಿಯನ್ನು ಬಂಧಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ. 

ಮುಂಬೈ ಪೊಲೀಸರು ವಿಮಾನ ನಿಲ್ದಾಣ ಬಳಿಯ ಡ್ರಾಗನ್ ಫ್ಲೈ ಕ್ಲಬ್ ಗೆ ದಾಳಿ ನಡೆಸಿದ್ದರು. ಈ ವೇಳೆ ಸುರೇಶ್ ರೈನಾ ಮತ್ತು ಗುರುರಾಂಧವ ಸೇರಿ 34 ಜನರನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ. 

ಇವರುಗಳ ವಿರುದ್ಧ ಐಪಿಸಿ ಸೆಕ್ಷನ್ 188, 269, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕ್ಲಬ್ ವ್ಯವಹಾರ ನಡೆಸುತ್ತಿದ್ದ ಕಾರಣ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಹೊಸ ವರ್ಷ, ಕ್ರಿಸ್'ಮಸ್ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಮತ್ತು ವಿಶೇಷವಾಗಿ ಮುಂಬೈಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ಸರಣಿ ನಿರ್ಬಂಧಗಳನ್ನು ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com