ಚೇತನ್ ಶರ್ಮಾ ಬಿಸಿಸಿಐ ನೂತನ ಆಯ್ಕೆ ಸಮಿತಿ ಅಧ್ಯಕ್ಷ 

ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯರ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಗುರುವಾರ ನೇಮಕಗೊಂಡಿದ್ದಾರೆ. 
ಚೇತನ್ ಶರ್ಮಾ
ಚೇತನ್ ಶರ್ಮಾ

ಅಹಮದಾಬಾದ್: ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿರಿಯರ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ಗುರುವಾರ ನೇಮಕಗೊಂಡಿದ್ದಾರೆ. 

ಮದನ್ ಲಾಲ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಚೇತನ್ ಶರ್ಮಾ, ಅಬೆಯ್ ಕುರುವಿಲ್ಲಾ ಮತ್ತು ದೇಬಾಶಿಶಿ ಮೊಹಾಂತಿ ಅವರನ್ನು ಹಿರಿಯರ ಆಯ್ಕೆ ಸಮಿತಿಯ ನೂತನ ಸದಸ್ಯರಾಗಿ ನೇಮಕ ಮಾಡಿದೆ. ಅಹಮದಾಬಾದ್ ನಲ್ಲಿ ವಾರ್ಷಿಕ ಮಹಾಸಭೆ ನಡೆದ ಬಳಿಕ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಈ ಹೆಸರುಗಳನ್ನು ಪ್ರಕಟಿಸಿದೆ.

ಹಿರಿತನ (ಒಟ್ಟಾರೇ ಟೆಸ್ಟ್ ಪಂದ್ಯಗಳು) ಆಧಾರದ ಮೇಲೆ ಚೇತನ್ ಶರ್ಮಾ ಅವರನ್ನು ಹಿರಿಯರ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸಮಿತಿ ಶಿಫಾರಸು ಮಾಡಿದೆ.  ಸಿಎಸಿ ಒಂದು ವರ್ಷದ  ನಂತರ ಅಭ್ಯರ್ಥಿಗಳನ್ನು ಪರಿಶೀಲಿಸಲಿದ್ದು, ಬಿಸಿಸಿಐಗೆ ಶಿಫಾರಸು ಮಾಡುವುದಾಗಿ ಅದು ಹೇಳಿದೆ. 

ನೂತನ ಮೂವರು ಸದಸ್ಯರು ಆಯ್ಕೆ ಸಮಿತಿಯಲ್ಲಿ  ಸುನೀಲ್ ಜೋಷಿ ಮತ್ತು ಹರವಿಂದರ್ ಸಿಂಗ್ ಅವರನ್ನು ಸೇರಿಕೊಳ್ಳಲಿದ್ದಾರೆ.  ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್ ಕರ್ ಕೂಡಾ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೊನೆಯಲ್ಲಿ ಅವರು ಆಯ್ಕೆಯಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com