2ನೇ ಟೆಸ್ಟ್: ಬುಮ್ರಾ, ಅಶ್ವಿನ್ ಮಾರಕ ಬೌಲಿಂಗ್ ಗೆ ಆಸ್ಟ್ರೇಲಿಯಾ ತತ್ತರ; ಮೊದಲ ಇನ್ನಿಂಗ್ಸ್ 195 ರನ್ ಗೆ ಆಲ್ ಔಟ್

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ 2 ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತದ ಸ್ಪಿನ್ನರ್ ಅಶ್ವಿನ್ ಹಾಗೂ ವೇಗಿ ಬುಮ್ರಾ ಕೇವಲ 195 ರನ್ ಗಳಿಗೆ ಸೀಮಿತವಾಗುವಂತೆ ಮಾಡಿದ್ದಾರೆ. 
2 ನೇ ಟೆಸ್ಟ್: ಆಸ್ಟ್ರೇಲಿಯಾ ತಂಡವನ್ನು 195 ರನ್ ಗಳಿಗೆ ಕಟ್ಟಿ ಹಾಕಿದ ಬುಮ್ರಾ, ಅಶ್ವಿನ್
2 ನೇ ಟೆಸ್ಟ್: ಆಸ್ಟ್ರೇಲಿಯಾ ತಂಡವನ್ನು 195 ರನ್ ಗಳಿಗೆ ಕಟ್ಟಿ ಹಾಕಿದ ಬುಮ್ರಾ, ಅಶ್ವಿನ್

ಮೆಲ್ಬೋರ್ನ್‌: ಭಾರತದ ಜಸ್‌ಪ್ರಿತ್‌ ಬುಮ್ರಾ (56ಕ್ಕೆ 4) ಹಾಗೂ ಆರ್ ಅಶ್ವಿನ್‌ (35ಕ್ಕೆ 3) ಅವರ ಮಾರಕ ಬೌಲಿಂಗ್ ಗೆ ನಲುಗಿದ ಆಸ್ಟ್ರೇಲಿಯಾ ತಂಡ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊದಲನೇ ದಿವನೇ 72.3 ಓವರ್‌ಗಳಿಗೆ 195 ರನ್‌ಗಳಿಗೆ ಆಲೌಟ್‌ ಆಯಿತು. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಟೀಮ್‌ ಪೇಯ್ನ್‌ ಯೋಜನೆಯನ್ನು ಭಾರತೀಯ ಬೌಲರ್‌ಗಳು ಮಣ್ಣು ಪಾಲು ಮಾಡಿದರು. ಆರಂಭದಿಂದಲೂ ಮಾರಕ ದಾಳಿ ನಡೆಸಿದ್ದ ಜಸ್‌ಪ್ರಿತ್‌ ಬುಮ್ರಾ 5ನೇ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಜೋ ಬರ್ನ್ಸ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಅವರು, ಟ್ರಾವಿಸ್‌ ಹೆಡ್‌ (38), ಮಿಚೆಲ್‌ ಸ್ಟಾರ್ಕ್‌ ಹಾಗೂ ನೇಥನ್‌ ಲಯಾನ್‌ ಸೇರಿದಂತೆ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿದರು. 

11ನೇ ಓವರ್‌ನಲ್ಲಿ ಬೌಲಿಂಗ್‌ ಆರಂಭಿಸಿದ್ದ ಆರ್‌ ಅಶ್ವಿನ್‌, ಮ್ಯಾಥ್ಯೂ ವೇಡ್‌(30) ಹಾಗೂ ಸ್ಟೀವನ್‌ ಸ್ಮಿತ್‌(0) ಪ್ರಮುಖ ವಿಕೆಟ್‌ಗಳನ್ನು ಬಹುಬೇಗ ಕಿತ್ತರು. ಇದು ಭಾರತಕ್ಕೆ ಟರ್ನಿಂಗ್‌ ಪಾಯಿಂಟ್‌ ಆಯಿತು. ನಂತರ ನಾಯಕ ಟಿಮ್‌ ಪೇಯ್ನ್‌(13) ಅವರನ್ನು ಔಟ್‌ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್‌ ಡೇ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಹೈದರಾಬಾದ್‌ ಮೂಲದ ಮೊಹಮ್ಮದ್‌ ಸಿರಾಜ್‌, ಎದುರಾಳಿ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಔಟ್‌ ಮಾಡುವ ಮೂಲಕ ದೀರ್ಘಾವಧಿ ಕ್ರಿಕೆಟ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದ್ದಾರೆ. ನಂತರ, ಕ್ಯಾಮೆರಾನ್‌ ಗ್ರೀನ್‌(9) ಅವರನ್ನು ಎಲ್‌ಬಿಡಬ್ಕ್ಯು ಬಲೆಗೆ ಬೀಳಿಸಿದರು. ಆ ಮೂಲಕ ಎರಡು ವಿಕೆಟ್‌ಗಳನ್ನು ಪಡೆದರು. ರವೀಂದ್ರ ಜಡೇಜಾ ಒಂದೇ ಒಂದು ವಿಕೆಟ್‌ ಪಡೆದರೆ, ಉಮೇಶ್‌ ಯಾದವ್‌ ವಿಕೆಟ್‌ ಇಲ್ಲದೆ ಪ್ರಥಮ ಇನಿಂಗ್ಸ್ ಮುಗಿಸಿದರು. 

ಲಾಬುಶೇನ್‌-ಹೆಡ್‌ ಅದ್ಭುತ ಜತೆಯಾಟ: ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಡ್‌ ಹೆಡ್‌ ಜೋಡಿ 86 ರನ್‌ ಜತೆಯಾಟವಾಡ್ಡಿದ್ದು ಬಿಟ್ಟರೆ ಆಸ್ಟ್ರೇಲಿಯಾ ಪರ ಬೇರೆ ಯಾವುದೇ ದೊಡ್ಡ ಜತೆಯಾಟ ಮೂಡಿಬರಲಿಲ್ಲ. ಈ ಜೋಡಿ ಜತೆಯಾಟದಿಂದ ಆಸ್ಟ್ರೇಲಿಯಾ ತಂಡ 100ರ ಗಡಿ ದಾಟಲು ಸಾಧ್ಯವಾಯಿತು. 48 ರನ್‌ ಗಳಿಸಿದ ಲಾಬುಶೇನ್‌ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಟ್ರಾವಿಸ್‌ ಹೆಡ್‌ 38 ಹಾಗೂ ಮ್ಯಾಥ್ಯೂ 30 ರನ್‌ಗಳಿಗೆ ಸೀಮಿತರಾದರು. 

ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್‌ನಲ್ಲಿಯೇ ಮಿಚೆಲ್‌ ಸ್ಟಾರ್ಕ್‌ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್ ಅವರನ್ನು ಶೂನ್ಯಕ್ಕೆ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿ ಆಘಾತ ನೀಡಿದರು. ಆ ಮೂಲಕ ಟೀಮ್‌ ಇಂಡಿಯಾ ಶೂನ್ಯ ಸಂಪಾದನೆಯಲ್ಲಿ ಒಂದು ವಿಕೆಟ್‌ ಕಳೆದುಕೊಂಡಿತು.

ಎರಡನೇ ವಿಕೆಟ್‌ಗೆ ಜತೆಯಾದ ಚೇತೇಶ್ವರ್‌ ಪೂಜಾರ ಹಾಗೂ ಶುಭಮನ್‌ ಗಿಲ್‌ ಜೋಡಿ, ಆಸ್ಟ್ರೇಲಿಯಾ ವೇಗಿಗಳನ್ನು ಎಚ್ಚರಿಕೆಯಿಂದ ಎದುರಿಸಿತು. ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ ಶುಭಮನ್ ಗಿಲ್‌ 38 ಎಸೆತಗಳಲ್ಲಿ ಐದು ಸೊಗಸಾದ ಬೌಂಡರಿಗಳ ನೆರವಿನಿಂದ ಅಜೇಯ 28 ರನ್‌ ಗಳಿಸಿ ಹೊಸ ಭರವಸೆಯನ್ನು ಮೂಡಿಸಿದರು. ಮತ್ತೊಂದು ತುದಿಯಲ್ಲಿ

ಚೇತೇಶ್ವರ್‌ ಪೂಜಾರ 23 ಎಸೆತಗಳಲ್ಲಿ 7 ರನ್‌ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಒಟ್ಟಾರೆ, ಮೊದಲನೇ ದಿನದ ಮುಕ್ತಾಯಕ್ಕೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 11 ಓವರ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದ್ದು, 159 ರನ್‌ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್‌:

ಆಸ್ಟ್ರೇಲಿಯಾ:
ಪ್ರಥಮ ಇನಿಂಗ್ಸ್: 195/10 (72.3)
ಮಾರ್ನಸ್‌ ಲಾಬುಶೇನ್‌- 48
ಟ್ರಾವಿಸ್‌ ಹೆಡ್‌-38
ಮ್ಯಾಥ್ಯೂ ವೇಡ್‌-30
ಬೌಲಿಂಗ್‌: ಜಸ್‌ಪ್ರಿತ್‌ ಬುಮ್ರಾ 56ಕ್ಕೆ 4, ಆರ್‌ ಅಶ್ವಿನ್‌ 35ಕ್ಕೆ 3, ಮೊಹಮ್ಮದ್‌ ಸಿರಾಜ್‌ 40ಕ್ಕೆ 2, ಆರ್‌ ಜಡೇಜಾ 15ಕ್ಕೆ 1

ಭಾರತ:
ಪ್ರಥಮ ಇನಿಂಗ್ಸ್: 36/1 (11)
ಶುಭಮನ್‌ ಗಿಲ್‌-28*
ಚೇತೇಶ್ವರ್ ಪೂಜಾರ-7*
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 14ಕ್ಕೆ 1

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com