2ನೇ ಟೆಸ್ಟ್: 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಆಸ್ಟ್ರೇಲಿಯಾ ತಂಡ 

ಮೊದಲನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಈಗ ಎರಡನೇ ಟೆಸ್ಟ್ ನಲ್ಲಿ ಎಡವಿದೆ. 
2ನೇ ಟೆಸ್ಟ್: 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ ಆಸ್ಟ್ರೇಲಿಯಾ ತಂಡ
2ನೇ ಟೆಸ್ಟ್: 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ ಆಸ್ಟ್ರೇಲಿಯಾ ತಂಡ

ಮೆಲ್ಬೋರ್ನ್ ಮೊದಲನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಈಗ ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ಎಡವಿದೆ. 

ಡಿ.26 ರಂದು ಆರಂಭವಾಗಿರುವ ಎರಡನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅಶ್ವಿನ್ ಹಾಗೂ ಬುಮ್ರಾ ಮಾರಕ ಬೌಲಿಂಗ್ ನಿಂದಾಗಿ ಆಸ್ಟ್ರೇಲಿಯಾ 162 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. 

ಆರಂಭಿಕ ಆಟಗಾರ ಜೋ ಬರ್ನ್ಸ್ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದ್ದು ಆಸ್ಟ್ರೇಲಿಯಾಗೆ ಆಘಾತ ನೀಡಿತ್ತು. ಈ ಬಳಿಕ ಕ್ರೀಸ್ ಗೆ ಬಂದ ಮ್ಯಾಥ್ಯೂ ವೇಡ್ ತಂಡಕ್ಕೆ ಚೇತರಿಕೆಯಾಗುವಂತೆಹ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದರೆ ದೊಡ್ಡ ಹೊಡೆತಕ್ಕೆ ಮುಂದಾಗಿ ಗುರಿಗೆ ಸರಿಯಾಗಿ ಸಿಗದ ಚೆಂಡು 30 ಯಾರ್ಡ್ ಸರ್ಕಲ್ ನ್ನು ದಾಟಲಿಲ್ಲ, ಈ ಹಂತದಲ್ಲಿ ಜಡೇಜಾ ಕ್ಯಾಚ್ ಹಿಡಿದು, ವೇಡ್ ನ್ನು 30 ರನ್ ಗಳಿಗೆ ಪೆವಿಲಿಯನ್ ನತ್ತ ನಡೆಯುವಂತೆ ಮಾಡಿದರು. 

4ನೇ ವಿಕೆಟ್‌ಗೆ ಉತ್ತಮ ಜೊತೆಯಾಟ ಆಡಿದ ಮಾರ್ನಸ್‌ ಲಾಬುಶೇನ್‌ ಹಾಗೂ ಟ್ರಾವಿಸ್‌ ಹೆಡ್‌ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ 86 ರನ್ ಕಲೆ ಹಾಕಿದ್ದ ಈ ಜೋಡಿಯ ಜೊತೆಯಾಟ ಟ್ರಾವಿಸ್ ಹೆಡ್ (38 ರನ್)  ಔಟ್‌ ಆಗುವ ಮೂಲಕ ಮುರಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com