ಬಾಕ್ಸಿಂಗ್ ಡೇ ಟೆಸ್ಟ್: ಅಜಿಂಕ್ಯ ರಹಾನೆಯಿಂದ ಬುದ್ಧಿವಂತಿಕೆಯ ಫೀಲ್ಡಿಂಗ್ ನಿಯೋಜನೆ- ವಿರೇಂದ್ರ ಸೆಹ್ವಾಗ್

ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ 'ಅತ್ಯುತ್ತಮ ಬೌಲಿಂಗ್ ಬದಲಾವಣೆಗಳು ಮತ್ತು ಬುದ್ದಿವಂತಿಕೆಯ ಫೀಲ್ಡಿಂಗ್ ನಿಯೋಜನೆಗಳು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ವಿರೇಂದ್ರ ಸೆಹ್ವಾಗ್ (ಎಡಕ್ಕೆ) ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್  ಔಟಿಗೆ ಮನವಿ ಮಾಡುತ್ತಿರುವ ಟೀಂ ಇಂಡಿಯಾ  ನಾಯಕ ಅಜಿಂಕ್ಯ ರಹಾನೆ
ವಿರೇಂದ್ರ ಸೆಹ್ವಾಗ್ (ಎಡಕ್ಕೆ) ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಔಟಿಗೆ ಮನವಿ ಮಾಡುತ್ತಿರುವ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ 'ಅತ್ಯುತ್ತಮ ಬೌಲಿಂಗ್ ಬದಲಾವಣೆಗಳು ಮತ್ತು ಬುದ್ದಿವಂತಿಕೆಯ ಫೀಲ್ಡಿಂಗ್ ನಿಯೋಜನೆಗಳು ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ.

ಎರಡನೆ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 195 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಜಸ್ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ ಪಡೆದರೆ, ಆಫ್ ಸ್ಪೀನ್ನರ್ ಆರ್. ಅಶ್ವಿನ್  ಸ್ಟೀವ್ ಸ್ಮಿತ್ ಸೇರಿದಂತೆ ಪ್ರಮುಖ ಮೂರು ವಿಕೆಟ್ ಗಳನ್ನು ಕಬಳಿಸಿದರು. ಮೊಹಮ್ಮದ್ ಸಿರಾಜ್ ಕೂಡಾ ಅದ್ಬುತ ಬೌಲಿಂಗ್ ಮಾಡಿ ಎರಡು ವಿಕೆಟ್ ಗಳನ್ನು ಕೆಡವಿದರು.

ರಹಾನೆಯಿಂದ ನಿಜಕ್ಕೂ ಅತ್ಯುತ್ತಮ ಬೌಲಿಂಗ್ ಬದಲಾವಣೆಗಳು ಮತ್ತು ಚುರುಕುತನದ ಫೀಲ್ಡಿಂಗ್ ನಿಯೋಜನೆ ಇತ್ತು. ಅಶ್ವಿನ್, ಬೂಮ್ರಾ, ಸಿರಾಜ್ ಬುದ್ದಿವಂತಿಕೆಯಿಂದ ಬೌಲಿಂಗ್ ಪ್ರದರ್ಶಿಸಿದರು. ಮೊದಲ ದಿನ 195ಕ್ಕೆ ಆಸ್ಟ್ರೇಲಿಯಾವನ್ನು ಕಟ್ಟಿಹಾಕುವಲ್ಲಿ ಅತ್ಯುತ್ತಮ ಪ್ರಯತ್ನ ಮಾಡಲಾಗಿದೆ. ಇದೀಗ  ಮೊದ ಇನ್ನಿಂಗ್ಸ್ ನಲ್ಲಿ ಉತ್ತಮ ಲೀಡ್ ನತ್ತ ಗಮನ ಹರಿಸಬೇಕಾಗಿದೆ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಮಿಚೆಲ್ ಸ್ಟಾರ್ಕ್ ಅವರ ಮೊದಲ ಓವರ್ ನಲ್ಲಿ ಮಯಾಂಕ್ ಅಗರ್ ವಾಲ್ ಔಟಾಗುವ ಮೂಲಕ ಭಾರತ ಆರಂಭಿಕ ಆಘಾತ ಅನುಭವಿಸಿದೆ. ನಂತರ ಶುಭ್ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಉತ್ತಮ ರೀತಿಯಲ್ಲಿ ಆಡುತ್ತಿದ್ದು, ಹೆಚ್ಚಿನ ವಿಕೆಟ್ ಬೀಳದಂತೆ ನೋಡಿಕೊಂಡಿದ್ದಾರೆ. 

ಮತ್ತೊಂದೆಡೆ ಟೀಂ ಇಂಡಿಯಾ ಬೌಲರ್ ಗಳನ್ನು ಕೊಂಡಾಡಿರುವ ಹಿರಿಯ ಆಟಗಾರ  ಹರ್ಭಜನ್ ಸಿಂಗ್, ಭಾರತದ ಕಡೆಯಿಂದ 300 ರನ್ ಗಳನ್ನು ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com