2ನೇ ದಿನದಾಟ ಅಂತ್ಯ: ನಾಯಕ ಅಜಿಂಕ್ಯ ರಹಾನೆ ಶತಕ, ಆಸೀಸ್ ವಿರುದ್ಧ ಭಾರತಕ್ಕೆ 82 ರನ್ ಮುನ್ನಡೆ

ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಜೇಯ(104) ಅದ್ಭುತ ಹಾಗೂ ಜವಾಬ್ದಾರಿಯುತವಾದ ಶತಕದ ನೆರವಿನಿಂದ ಟೀಂ ಇಂಡಿಯಾ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಸಫಲವಾಗಿದೆ.
ಅಜಿಂಕ್ಯ ರಹಾನೆ-ಜಡೇಜಾ
ಅಜಿಂಕ್ಯ ರಹಾನೆ-ಜಡೇಜಾ

ಮೆಲ್ಬೋರ್ನ್: ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಜೇಯ(104) ಅದ್ಭುತ ಹಾಗೂ ಜವಾಬ್ದಾರಿಯುತವಾದ ಶತಕದ ನೆರವಿನಿಂದ ಟೀಂ ಇಂಡಿಯಾ ತಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮುನ್ನಡೆ ಗಳಿಸುವಲ್ಲಿ ಸಫಲವಾಗಿದೆ.

ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ 1 ವಿಕೆಟ್ ಗೆ 36 ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ದಿನದಂತ್ಯಕ್ಕೆ 91. 3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ  277 ರನ್ ಗಳಿಸಿ, ಒಟ್ಟಾರೆ 82 ರನ್ ಗಳ ಅಮೂಲ್ಯ ಮುನ್ನಡೆ ಪಡೆದಿದೆ.

ಅಜಿಂಕ್ಯ ರಹಾನೆ ಸಿಕ್ಕ ಜೀವದಾನಗಳ ಲಾಭ ಪಡೆದು ಅಜೇಯ 104 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 12ನೇ ಶತಕ ಬಾರಿಸಿ ಮಿಂಚಿದರು. 195ನೇ ಎಸೆತದಲ್ಲಿ ರಹಾನೆ ಶತಕ ಸಿಡಿಸಿ ಸಂಭ್ರಮಿಸಿದರು. ಟೀಂ ಇಂಡಿಯಾ ಪರ ಶುಭ್ಮನ್ ಗಿಲ್ 45, ಚೇತೇಶ್ವರ ಪೂಜಾರ 17, ಹನುಮ ವಿಹಾರಿ 21, ರಿಷಬ್ ಪಂತ್ 29 ಮತ್ತು ರವೀಂದ್ರ ಜಡೇಜಾ ಅಜೇಯ 40 ರನ್ ಬಾರಿಸಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಟೀಮ್‌ ಪೇಯ್ನ್‌ ಯೋಜನೆಯನ್ನು ಭಾರತೀಯ ಬೌಲರ್‌ಗಳು ಮಣ್ಣು ಪಾಲು ಮಾಡಿದರು. ಆರಂಭದಿಂದಲೂ ಮಾರಕ ದಾಳಿ ನಡೆಸಿದ್ದ ಜಸ್‌ಪ್ರಿತ್‌ ಬುಮ್ರಾ 5ನೇ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಜೋ ಬರ್ನ್ಸ್‌ ಅವರನ್ನು ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದ್ದರು. ನಂತರ ಅವರು, ಟ್ರಾವಿಸ್‌ ಹೆಡ್‌ (38), ಮಿಚೆಲ್‌ ಸ್ಟಾರ್ಕ್‌ ಹಾಗೂ ನೇಥನ್‌ ಲಯಾನ್‌ ಸೇರಿದಂತೆ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿದರು. 

ಭಾರತದ ಜಸ್‌ಪ್ರಿತ್‌ ಬುಮ್ರಾ (56ಕ್ಕೆ 4) ಹಾಗೂ ಆರ್ ಅಶ್ವಿನ್‌ (35ಕ್ಕೆ 3) ಅವರ ಮಾರಕ ಬೌಲಿಂಗ್ ಗೆ ನಲುಗಿದ ಆಸ್ಟ್ರೇಲಿಯಾ ತಂಡ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊದಲನೇ ದಿವನೇ 72.3 ಓವರ್‌ಗಳಿಗೆ 195 ರನ್‌ಗಳಿಗೆ ಆಲೌಟ್‌ ಆಯಿತು. 

11ನೇ ಓವರ್‌ನಲ್ಲಿ ಬೌಲಿಂಗ್‌ ಆರಂಭಿಸಿದ್ದ ಆರ್‌ ಅಶ್ವಿನ್‌, ಮ್ಯಾಥ್ಯೂ ವೇಡ್‌(30) ಹಾಗೂ ಸ್ಟೀವನ್‌ ಸ್ಮಿತ್‌(0) ಪ್ರಮುಖ ವಿಕೆಟ್‌ಗಳನ್ನು ಬಹುಬೇಗ ಕಿತ್ತರು. ಇದು ಭಾರತಕ್ಕೆ ಟರ್ನಿಂಗ್‌ ಪಾಯಿಂಟ್‌ ಆಯಿತು. ನಂತರ ನಾಯಕ ಟಿಮ್‌ ಪೇಯ್ನ್‌(13) ಅವರನ್ನು ಔಟ್‌ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com