ಟೆಸ್ಟ್ ಪಂದ್ಯ: ಬೆತ್ತಲೆಯಾಗಿ ಅಂಗಳಕ್ಕೆ ಪ್ರವೇಶಿಸಿದ ಅಭಿಮಾನಿ, ವಿಡಿಯೋ!

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನ ಗ್ಯಾಲರಿಯಲ್ಲಿದ್ದ ವೀಕ್ಷಕರಿಗೆ ಆನಂದಿಸಲು ಮತ್ತು ಸವಿಯಲು ಸಾಕಷ್ಟು ಕ್ಷಣಗಳು ಕಾರಣವಾಗಿದ್ದವು.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಮೌಂಟ್‌ ಮೌಂಗನುಯಿ: ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೊದಲನೇ ಟೆಸ್ಟ್ ಪಂದ್ಯದ ಮೊದಲ ದಿನ ಗ್ಯಾಲರಿಯಲ್ಲಿದ್ದ ವೀಕ್ಷಕರಿಗೆ ಆನಂದಿಸಲು ಮತ್ತು ಸವಿಯಲು ಸಾಕಷ್ಟು ಕ್ಷಣಗಳು ಕಾರಣವಾಗಿದ್ದವು. ಎಲ್ಲದಕ್ಕಿಂತ ಮುಖ್ಯವಾಗಿ ಗ್ಯಾಲರಿಯಲ್ಲಿದ್ದ ವೀಕ್ಷಕನೊಬ್ಬ ಬೆತ್ತಲೆಯಲ್ಲಿ ಅಂಗಳಕ್ಕೆ ಪ್ರವೇಶಿಸಿ ಕೆಲ ನಿಮಿಷ ಪಂದ್ಯಕ್ಕೆ ಅಡ್ಡಿ ಮಾಡಿದ್ದಲ್ಲದೆ ಪ್ರೇಕ್ಷಕರ ಮೊಗದಲ್ಲಿ ನಗು ಮೂಡಿಸಿದರು. 

ಇಲ್ಲಿನ ಬೇ ಓವಲ್‌ ಅಂಗಳದಲ್ಲಿ ಬ್ಯಾಟಿಂಗ್‌ ಮಾಡಲು ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಕ್ರೀಸ್‌ಗೆ ಆಗಮಿಸಿ ಇನ್ನೇನು ಬ್ಯಾಟಿಂಗ್‌ ಮಾಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಅಂಗಳಕ್ಕೆ ಪ್ರವೇಶಿಸಿದರು. ಅಲ್ಲದೆ, ತಮ್ಮ ಖಾಸಗಿ ಭಾಗವನ್ನು ಕೈಗಳಿಂದ ಮುಚ್ಚಿಕೊಂಡು ಪಿಚ್‌ನತ್ತಾ ಓಡಿ ಬಂದರು. ಈ ವೇಳೆ ಕೆಲ ಕಾಲ ಆಟವನ್ನು ನಿಲ್ಲಿಸಿಲಾಗಿತ್ತು.

ಈ ವೇಳೆ ಆತನನ್ನು ಹಿಡಿಯಲು ಭದ್ರತಾ ಸಿಬ್ಬಂದಿ ಅಂಗಳಕ್ಕೆ ಆಗಮಿಸಿದರು. ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುತ್ತಿದ್ದ ವ್ಯಕ್ತಿ ಎಲ್ಲರಿಗೂ ಭರ್ಜರಿ ರಸದೌತಣ ಉಣಬಡಿಸಿದರು. ಕೊನೆಗೂ ಹಿಡಿದ ಆತನನ್ನು ಭದ್ರತಾ ಸಿಬ್ಬಂದಿ ಅಂಗಳದಿಂದ ಹೊರಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಅಜೇಯ 94 ರನ್‌ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದ ಕೇನ್‌ ವಿಲಿಯಮ್ಸನ್‌ ಇನ್ನೇನು ಶತಕದ ಸಮೀಪವಿದ್ದಂತೆ ಈ ಹಾಸ್ಯಭರಿತ ಘಟನೆಯಿಂದಾಗಿ 5 ರಿಂದ 10 ನಿಮಿಷಗಳ ಕಾಲ ವ್ಯರ್ಥವಾಯಿತು. ಈ ಕಾರಣದಿಂದ ಮೊದಲನೇ ದಿನ ಕಿವೀಸ್‌ ನಾಯಕ ಶತಕ ಪೂರೈಸಲು ಸಾಧ್ಯವಾಗಲಿಲ್ಲ. ಟ್ವಿಟರ್‌ನಲ್ಲಿ ಕೆಲ ಅಭಿಮಾನಿಗಳು ಈ ವಿಡಿಯೋಗೆ ಹಾಸ್ಯಭರಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇನ್ನು ಪಂದ್ಯದಲ್ಲಿ ಕೇನ್ ವಿಲಿಯಮ್ಸನ್‌ (129) ಶತಕ ಹಾಗೂ ರಾಸ್‌ ಟೇಲರ್‌ (70), ಹೆನ್ರಿ ನಿಕೋಲ್ಸ್‌(56) ಮತ್ತು ವ್ಯಾಟ್ಲಿಂಗ್‌ (73) ಅವರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್‌ ಪ್ರಥಮ ಇನಿಂಗ್ಸ್‌ನಲ್ಲಿ 155 ಓವರ್‌ಗಳಿಗೆ 431 ರನ್‌ಗಳಿಗೆ ಆಲೌಟ್‌ ಆಯಿತು. ಪಾಕಿಸ್ತಾನದ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ಶಾಹೀನ್‌ ಅಫ್ರಿದಿ 4 ವಿಕೆಟ್‌ ಪಡೆದರೆ, ಯಾಸೀರ್‌ ಶಾ ಮೂರು ವಿಕೆಟ್‌ ಕಿತ್ತರು.

ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಟಿಮ್‌ ಸೌಥ್‌(2) ಹಾಗೂ ಕೈಲ್‌ ಜಾಮಿಸನ್‌(2) ಅವರ ಮಾರಕ ದಾಳಿಗೆ ನಲುಗಿ 70 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 115 ರನ್‌ ಗಳಿಸಿದ್ದು, ಕ್ರೀಸ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌(31) ಹಾಗೂ ಫಹೀಮ್‌ ಅಶ್ರಫ್‌(22) ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com