ರೋಹಿತ್ ಶರ್ಮಾ ತಂಡ ಸೇರುತ್ತಾರೆ, ಆದರೆ ಆಡುವುದು ಡೌಟ್: ರವಿಶಾಸ್ತ್ರಿ

ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡು ಇದೀಗ ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿರುವ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಮೆಲ್ಬೋರ್ನ್‌ನಲ್ಲಿರುವ ಟೀಂ ಇಂಡಿಯಾ ಸೇರಲಿದ್ದಾರೆ. ಆದರೆ ಜನವರಿ 7ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಮೆಲ್ಬೋರ್ನ್: ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡು ಇದೀಗ ಸಿಡ್ನಿಯಲ್ಲಿ ಕ್ವಾರಂಟೈನ್ ಆಗಿರುವ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ಮೆಲ್ಬೋರ್ನ್‌ನಲ್ಲಿರುವ ಟೀಂ ಇಂಡಿಯಾ ಸೇರಲಿದ್ದಾರೆ. ಆದರೆ ಜನವರಿ 7ರಿಂದ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

ಸಿಡ್ನಿಯಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸದಿದ್ದರೆ ಮೂರನೇ ಟೆಸ್ಟ್ ಪಂದ್ಯವನ್ನು ಮೆಲ್ಬೋರ್ನ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ಸಿಡ್ನಿಯಿಂದ ಮೆಲ್ಬೋರ್ನ್ ಗೆ ತೆರಳಲಿದ್ದಾರೆ. ಆದರೆ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.

ರೋಹಿತ್ ನಾಳೆ ತಂಡವನ್ನು ಸೇರಿಕೊಳ್ಳುತ್ತಾರೆ. ಒಂದೆರಡು ವಾರಗಳಿಂದ ಅವರು ಕ್ವಾರಂಟೈನ್ ನಲ್ಲಿದ್ದರು. ಹೀಗಾಗಿ ಅವರು ದೈಹಿಕವಾಗಿ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮುನ್ನ ಅವರ ಸ್ಥಿತಿಗತಿ ಕಡೆಗೆ ಗಮನ ನೀಡುವ ಅಗತ್ಯವಿದೆ ಎಂದರು. 

ಐಪಿಎಲ್ 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರು ತಂಡವನ್ನು ಐದನೇ ಬಾರಿಗೆ ಚಾಂಪಿಯನ್ ಆಗುವಂತೆ ಮಾಡಿದ್ದರು. ಆದರೆ ಟೂರ್ನಿ ವೇಳೆ ಅವರು ಮಂಜಿರಜ್ಜು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಸಂಪೂರ್ಣ ಫಿಟ್ನೆಸ್ ಗಳಿಸಿಕೊಳ್ಳುವ ಮೂಲಕ ಡಿಸೆಂಬರ್ 11ರಂದು ಆಸ್ಟ್ರೇಲಿಯಾಗೆ ಪ್ರಮಾಣ ಬೆಳೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com