ಐಸಿಸಿ ಟೆಸ್ಟ್ ರ್ಯಾಂಕಿಂಗ್: ಸ್ಮಿತ್, ಕೊಹ್ಲಿಯನ್ನು ಹಿಂದಿಕ್ಕಿದ ವಿಲಿಯಮ್ಸನ್ ಗೆ ಅಗ್ರಪಟ್ಟ, ರಹಾನೆಗೆ ಆರನೇ ಸ್ಥಾನ

 ಟೌರಂಗದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್: ಸ್ಮಿತ್, ಕೊಹ್ಲಿಯನ್ನು ಹಿಂದಿಕ್ಕಿದ ವಿಲಿಯಮ್ಸನ್ ಗೆ ಅಗ್ರಪಟ್ಟ, ರಹಾನೆಗೆ ಆರನೇ ಸ್ಥಾನ

ದುಬೈ: ಟೌರಂಗದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಭಾರತದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿ ಪುರುಷರ ಟೆಸ್ಟ್ ಪ್ಲೇಯರ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿಲಿಯಮ್ಸನ್ ಈ ಹಿಂದೆ 2015 ರ ಅಂತ್ಯದ ವೇಳೆಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದರು ಆದರೆ ಸ್ಮಿತ್ ಅಥವಾ ಕೊಹ್ಲಿ ಇಬ್ಬರೂ ಮೊದಲಿನಿಂದಲೂ ಮೊದಲ ಸ್ಥಾನದಲ್ಲಿದ್ದಾರೆ.ಈ ವರ್ಷವೂ, ಸ್ಮಿತ್ 313 ದಿನಗಳು ಮತ್ತು ಕೊಹ್ಲಿ 51 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು,

ಐಸಿಸಿ ಗುರುವಾರ ಬಿಡುಗಡೆ ಮಾಡಿದ ವರ್ಷಾಂತ್ಯದ ಅಪ್‌ಡೇಟ್‌ನಲ್ಲಿ, ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪ್ರದರ್ಶನಗಳು ಸಹ ಸೇರಿವೆ, ವಿಲಿಯಮ್ಸನ್ ಪಾಕ್ ವಿರುದ್ಧ 129 ಮತ್ತು 21 ರನ್​ ಗಳಿಸಿ 13 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದುಕೊಂಡಿದ್ದಾರೆ. . ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಭಾರತದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ನಾಯಕ ಕೊಹ್ಲಿ ದೂರು ಉಳಿದಿದ್ದು ಎರಡನೇ ಸ್ಥಾನ್ದಲ್ಲೇ ಮುಂದುವರಿದಿದ್ದರೆ ಸ್ಮಿತ್ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಕೊಹ್ಲಿಯ ಅನುಪಸ್ಥಿತಿಯಲ್ಲಿ ಅಗ್ರಸ್ಥಾನದಲ್ಲಿರುವ ಅಜಿಂಕ್ಯ ರಹಾನೆ, ಮೆಲ್ಬೋರ್ನ್‌ನಲ್ಲಿ ಎಂಟು ವಿಕೆಟ್‌ಗಳ ಟೆಸ್ಟ್ ಜಯದೊಂದಿಗೆ ಟೀಂ ಇಂಡಿಯಾಗೆ ಮಾರ್ಗದರ್ಶಕರಾಗಿ ದೊಡ್ಡ ಮುನ್ನಡೆ ಗಳಿಸಿದ್ದಾರೆ. ರಹಾನೆ ಐದು ಸ್ಥಾನ ಮೇಲೇರಿ ಆರನೇ ಸ್ಥಾನ ತಲುಪಿದ್ದಾರೆ. 2019 ರ ಅಕ್ಟೋಬರ್‌ನ ನಂತರ ರಹಾನೆ ವೃತ್ತಿಜೀವನದ ಅತ್ಯುತ್ತಮ ಸಾಧನೆ ಇದಾಗಿದೆ. 

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(ಏಳನೆ) ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(ಒಂಬತ್ತನೆ) ಅಗ್ರ 10 ರೊಳಗೆ ಗಮನಾರ್ಹ ಸ್ಥಾ ಪಡೆದವರಾಗಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ 57 ರನ್ ಗಳಿಸಿ  11 ಸ್ಥಾನ ಮೇಲೇರಿ ಬ್ಯಾಟ್ಸ್‌ಮನ್‌ಗಳ  ಪಟ್ಟಿಯಲ್ಲಿ 36ನೇ ಸ್ಥಾನ ತಲುಪಿದ್ದಾರೆ,ಬೌಲರ್ ಗಳ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದಾರೆ, ಇನ್ನು  ಆಲ್​​ರೌಂಡ್ ಆಟಗಾರರ ಪಟ್ಟಿಯಲ್ಲಿ ಜಡೇಜಾ ಮೂರನೇ ಸ್ಥಾನದಲ್ಲಿ ಮುಂದುವರಿದರೆ ಇದೇ ಮೊದಲ ಪಂದ್ಯವಾಡಿದ್ದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ಗಳ  ಪಟ್ಟಿಯಲ್ಲಿ 76 ಮತ್ತು 77ನೇ ಸ್ಥಾನಗಳಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com