ನಾಳೆ ಕಿವೀಸ್ ವಿರುದ್ಧ ಕಡೇ ಟಿ20, ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವತ್ತ ಟೀಂ ಇಂಡಿಯಾ ಚಿತ್ತ

ಸತತ ಎರಡನೇ ಬಾರಿ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದ ಭಾರತ ತಂಡ ನಾಳೆ ಇಲ್ಲಿನ ಬೇ ಓವಲ್ ಅಂಗಳದಲ್ಲಿ ನಡೆಯುವ ಐದನೇ ಹಾಗೂ ಅಂತಿಮ ಪಂದ್ಯವನ್ನು ಗೆದ್ದು 5-0 ಅಂತರದಲ್ಲಿ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಗುರಿ ಹೊಂದಿದೆ. ಮತ್ತೊಂದೆಡೆ ಈಗಾಗಲೇ ಸರಣಿ ಬಿಟ್ಟುಕೊಟ್ಟಿರುವ ನ್ಯೂಜಿಲೆಂಡ್ ಇನ್ನುಳಿದ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಹ
ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವತ್ತ ಟೀಂ ಇಂಡಿಯಾ ಚಿತ್ತ
ಚುಟುಕು ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವತ್ತ ಟೀಂ ಇಂಡಿಯಾ ಚಿತ್ತ

ಮೌಂಟ್ ಮೌಂಗ್ನನುಯಿ: ಸತತ ಎರಡನೇ ಬಾರಿ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದ ಭಾರತ ತಂಡ ನಾಳೆ ಇಲ್ಲಿನ ಬೇ ಓವಲ್ ಅಂಗಳದಲ್ಲಿ ನಡೆಯುವ ಐದನೇ ಹಾಗೂ ಅಂತಿಮ ಪಂದ್ಯವನ್ನು ಗೆದ್ದು 5-0 ಅಂತರದಲ್ಲಿ ಟಿ-20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಗುರಿ ಹೊಂದಿದೆ. ಮತ್ತೊಂದೆಡೆ ಈಗಾಗಲೇ ಸರಣಿ ಬಿಟ್ಟುಕೊಟ್ಟಿರುವ ನ್ಯೂಜಿಲೆಂಡ್ ಇನ್ನುಳಿದ ಕೊನೆಯ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.

ಚುಟುಕು ಮಾದರಿಯ ಸ್ವರೂಪಕ್ಕೆೆ ಬಂದಾಗ ಗೆಲುವಿನ ವೇಗವನ್ನು ಮುಂದುವರಿಸಬೇಕಾದ ಅಗತ್ಯತೆ ಇದೆ. ಪ್ರಸ್ತುತ ಕಿವೀಸ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ ತಂಡ ಇದನ್ನು ನಿಖರವಾಗಿ ಮಾಡುತ್ತಿದೆ ಎಂದು ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಪಂದ್ಯದ ಬಳಿಕ ಹೇಳಿದ್ದರು.

ಮೂರನೇ ಟಿ-20 ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಅವರು ಕ್ರೀಸ್‌ನಲ್ಲಿ ಇದ್ದರೂ ಮೊಹಮ್ಮದ್ ಶಮಿ ಅವರು ಕೊನೆಯ ಓವರ್‌ನಲ್ಲಿ ಒಂಬತ್ತು ರನ್‌ಗಳಿಗೆ ನ್ಯೂಜಿಲೆಂಡ್ ತಂಡವನ್ನು ನಿಯಂತ್ರಿಸಿದ್ದರು. ಅದೇ ರೀತಿ ಶುಕ್ರವಾರ ನಾಲ್ಕನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದು ಕೇವಲ ಏಳು ರನ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವೆಲ್ಲಿಂಗ್ಟನ್ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ನಾಲ್ಕು ವಿಕೆಟ್‌ಗಳು ಬಹುಬೇಗ ಉರುಳಿದ್ದರಿಂದ ತೀವ್ರ ಒತ್ತಡಕ್ಕೆೆ ಒಳಗಾಯಿತು. ಸೂಪರ್ ಓವರ್‌ನಲ್ಲಿ ಮತ್ತೊಮ್ಮೆ ಟಿಮ್ ಸೌಥೆ ಅವರು ವೈಫಲ್ಯರಾದರು.

ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಅವರು ನಾಲ್ಕನೇ ಪಂದ್ಯಕ್ಕೆೆ ವಿಶ್ರಾಂತಿ ಪಡೆದಿದ್ದರೂ ಭಾರತ ತಂಡ ಹೋರಾಡಿ ಸೋಲಿನ ದವಡೆಯಿಂದ ಪಾರಾಗಿ ಗೆಲುವು ಸಾಧಿಸಿದ್ದು ಆಟಗಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಸೆಡಾನ್ ಪಾರ್ಕ್ ಅಂಗಳದಲ್ಲಿ ಸರಣಿ ವಶಪಡಿಸಿಕೊಂಡ ಬಳಿಕ ವಿರಾಟ್ ಕೊಹ್ಲಿ ಮಾತನಾಡಿ, ಇನ್ನುಳಿದ ಎರಡು ಪಂದ್ಯಗಳಲ್ಲಿ ವರ್ಷದ ಕೊನೆಯಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ನಿಮಿತ್ತ ಆಟಗಾರರ ಮೇಲೆ ಚಿತ್ತ ಹರಿಸಲಾಗುವುದು ಎಂದಿದ್ದರು.

 ಸಂಜು ಸ್ಯಾಮ್ಸನ್, ನವದೀಪ್ ಸೈನಿ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನು ಕೊಹ್ಲಿಿ ಹೊಗಳಿದ್ದರು. ಸಂಜು ಭಯ ರಹಿತ ಆಟಗಾರ. ಅವರಿಗೆ ಇದು ಉತ್ತಮ ಅವಕಾಶವಾಗಿತ್ತು. ವಾಷಿಂಗ್ಟನ್ ಸುಂದರ್ ಅತ್ಯುತ್ತಮವಾಗಿ ಆಡಿದ್ದರು ಹಾಗೂ ನವದೀಪ್ ಸೈನಿ ಕೊನೆಯ ಓವರ್‌ನಲ್ಲಿ ಒಬ್ಬ ಬ್ಯಾಟ್ಸ್‌‌ಮನ್ ರೀತಿ ಆಡಿದ್ದರು ಎಂದು ಶ್ಲಾಘಿಸಿದ್ದರು.

ಭಾರತ ಯುವ ಆಟಗಾರರು ಅಂತಿಮ ಪಂದ್ಯಕ್ಕೆೆ ಸಿಡಿದು ನಿಂತಿದ್ದು, ನ್ಯೂಜಿಲೆಂಡ್ ಅನುಭವಿ ಆಟಗಾರರು ಸರಣಿ ಕ್ಲೀನ್ ಸ್ವೀಪ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಲಿದ್ದಾರೆ. ವಿಲಿಯಮ್ಸನ್ ಅನುಪಸ್ಥಿಯಲ್ಲಿ ಕಾಲಿನ್ ಮನ್ರೊ, ಟಿಮ್ ಸೀಫರ್ಟ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಕೊನೆಯ ಓವರ್‌ನಲ್ಲಿ ಅಗತ್ಯವಿದ್ದ ಏಳು ರನ್ ಪೂರೈಸಲು ರಾಸ್ ಟೇಲರ್ ತಮ್ಮ ಅನುಭವವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. 

ಹಿರಿಯ ವೇಗಿ ಟಿಮ್ ಸೌಥ್ ಅವರು ಎರಡೂ ಪಂದ್ಯಗಳ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಿದ ರೀತಿ ಆತಿಥೇಯರಿಗೆ ಕಳವಳನ್ನುಂಟು ಮಾಡಿತ್ತು. ಒಂದು ವೇಳೆ ಕೊನೆಯ ಪಂದ್ಯದಲ್ಲಿ ಆತಿಥೇಯರು ಎಚ್ಚೆೆತ್ತುಕೊಂಡಿಲ್ಲವಾದರೆ ಈಗಾಗಲೇ ಸರಣಿ ಗೆದ್ದಿರುವ ಭಾರತ ಅಂತಿಮ ಪಂದ್ಯವನ್ನು ಕಸಿದುಕೊಳ್ಳಲಿದ್ದಾರೆ.
ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ಅವರು ನಾಳಿನ ಪಂದ್ಯಕ್ಕೆೆ ಕಣಕ್ಕೆೆ ಇಳಿಯುವ ಸಾಧ್ಯತೆ ಇದೆ.

ಸಂಭಾವ್ಯ ಆಟಗಾರರು
ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂದುಬೆ/ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬುಮ್ರಾ. 

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್ಹೋಮ್ , ಟಿಮ್ ಸೀಫರ್ಟ್, ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ, ಹಮೀಶ್ ಬೆನೆಟ್, ಟಿಮ್ ಸೌಥ್.

ಸಮಯ: ನಾಳೆ ಮಧ್ಯಾಹ್ನ 12:30
ಸ್ಥಳ: ಬೇ ಓವಲ್ ಕ್ರೀಡಾಂಗಣ, ಮೌಂಟ್ ಮೌಗ್ನನುಯಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com