ಭಾರತ ಕ್ರಿಕೆಟ್ ಇತಿಹಾಸದಲ್ಲೇ ಶಾರ್ದೂಲ್, ವಿರಾಟ್ ಕೊಹ್ಲಿಯಿಂದ ಅದ್ಭುತ ರನೌಟ್, ವಿಡಿಯೋ ವೈರಲ್!

ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ವಿರಾಟ್ ಕೊಹ್ಲಿ ಸೇರಿ ಅದ್ಭುತವಾಗಿ ರನೌಟ್ ಮಾಡಿದ್ದು ಕಿವೀಸ್ ಬ್ಯಾಟ್ಸ್ ಮನ್ ಕೊಲಿನ್ ಮನ್ರೋ ಶಾಕ್ ಆಗಿದ್ದಾರೆ. 
ಶಾರ್ದೂಲ್-ಕೊಹ್ಲಿ
ಶಾರ್ದೂಲ್-ಕೊಹ್ಲಿ

ವಿಲ್ಲಿಂಗ್ಟನ್: ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ವಿರಾಟ್ ಕೊಹ್ಲಿ ಸೇರಿ ಅದ್ಭುತವಾಗಿ ರನೌಟ್ ಮಾಡಿದ್ದು ಕಿವೀಸ್ ಬ್ಯಾಟ್ಸ್ ಮನ್ ಕೊಲಿನ್ ಮನ್ರೋ ಶಾಕ್ ಆಗಿದ್ದಾರೆ. 

64 ರನ್ ಪೇರಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೊಲಿನ್ ಮನ್ರೋ ಅವರು ಶಿವಂ ದುಬೆ ಬೌಲಿಂಗ್ ನಲ್ಲಿ ಚೆಂಡನ್ನು ಸ್ವೀಪರ್ ಕವರ್ಸ್ ನಲ್ಲಿ ಬಾರಿಸಿದರು. ಎರಡು ರನ್ ತೆಗೆದುಕೊಳ್ಳಲು ಮುಂದಾದರೂ. ಈ ವೇಳೆ ಬೌಂಡರಿ ಗೆರೆಯಲ್ಲಿದ್ದ ಶಾರ್ದೂಲ್ ಚೆಂಡನ್ನು ಕೊಹ್ಲಿ ಕೈಗೆ ಎಸೆದಿದ್ದು ಕೊಹ್ಲಿ ನೇರವಾಗಿ ಚೆಂಡನ್ನು ಸ್ಟ್ರೈಕ್ ನ ವಿಕೆಟ್ ಗೆ ಹೊಡೆದು ರನೌಟ್ ಮಾಡಿದರು. 

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಟೀಂ ಇಂಡಿಯಾದ ಫೀಲ್ಡಿಂಗ್ ಬಗ್ಗೆ ನೆಟಿಗರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ. 

ಕಿವೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿ ಸತತ ನಾಲ್ಕನೇ ಜಯ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com