ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮೇಲೆ ಗುಡುಗಿದ ಸೆಹ್ವಾಗ್: ಕಾರಣ ಏನು ಗೊತ್ತಾ?

ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆೆ ಮಾಜಿ ಆರಂಭಿಕ ಬ್ಯಾಟ್ಸ್‌‌ಮನ್ ವಿರೇಂದ್ರ ಸೆಹ್ವಾಗ್ ಅವರು ಟೀಮ್ ಮ್ಯಾನೇಜ್‌ಮೆಂಟ್ ಬಗ್ಗೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆೆ ಮಾಜಿ ಆರಂಭಿಕ ಬ್ಯಾಟ್ಸ್‌‌ಮನ್ ವಿರೇಂದ್ರ ಸೆಹ್ವಾಗ್ ಅವರು ಟೀಮ್ ಮ್ಯಾನೇಜ್‌ಮೆಂಟ್ ಬಗ್ಗೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ತಂಡದಲ್ಲಿ ಆಟಗಾರರನ್ನು ಅಂತಿಮ 11ರಲ್ಲಿ ಆಡಿಸುವ ಹಾಗೂ ಕೈಬಿಡುವ ಬಗ್ಗೆ  ಸದ್ಯದ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರೀತಿಯಲ್ಲೇ ನಡೆದುಕೊಳ್ಳುತ್ತಿದ್ದಾರೆ. ವಿಕೆಟ್‌ ಕೀಪರ್ ಬ್ಯಾಟ್ಸ್‌‌ಮನ್ ರಿಷಭ್ ಪಂತ್ ಅವರನ್ನು ಆಡುವ 11 ರ ಬಳಗದಿಂದ ಕೈಬಿಟ್ಟಿರುವ ನಿರ್ಧಾರ ಕುರಿತಾಗಿ ಕಿಡಿ ಕಾರಿದ ವೀರೇಂದ್ರ ಸೆಹ್ವಾಗ್, ಮ್ಯಾಚ್ ವಿನ್ನಿಂಗ್ ಆಟಗಾರ ಎಂದ ಮೇಲೆ ಆತನನ್ನು ಹೊರಗಿಟ್ಟಿರುವುದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.

2012ರಲ್ಲಿ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್ ಮತ್ತು ನಾನು ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌‌ಗಳಾಗಿದ್ದೆವು. ನಾವು ಮಂಧಗತಿಯ ಫೀಲ್ಡರ್‌ಗಳೆಂದು ಪ್ರತಿ ಪಂದ್ಯಗಳಲ್ಲಿ ಒಬ್ಬರನ್ನಾಡಿಸಿ ಮತ್ತೊಬ್ಬರನ್ನು ಕೈಬಿಡಲಾಗುತ್ತಿತ್ತು. ಈ ಬಗ್ಗೆ ಡ್ರೆಸಿಂಗ್ ರೂಮ್‌ನಲ್ಲಿ ಚರ್ಚೆ ಮಾಡಲಾಗಿರಲಿಲ್ಲ. ಬದಲಾಗಿ ಮಾಧ್ಯಮಗಳಲ್ಲಿ ಈ ವಿಚಾರ ಹರಿದಾಡಿತ್ತು ಎಂದು ಧೋನಿ ಬಗ್ಗೆ ಮಾಜಿ ಸ್ಪೋಟಕ ಬ್ಯಾಟ್ಸ್‌‌ಮನ್ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com