4 ರಾಷ್ಟ್ರಗಳ ಸರಣಿಗೆ ಮಹೂರ್ತ ಫಿಕ್ಸ್ ಮಾಡಲು ಲಂಡನ್‌ಗೆ ತೆರಳಿದ ಬಿಸಿಸಿಐ ಬಾಸ್ ಗಂಗೂಲಿ!

ನಾಲ್ಕು ರಾಷ್ಟ್ರಗಳ ಸರಣಿಗೆ ಮಹೂರ್ತ ನಿಗದಿ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

Published: 06th February 2020 03:33 PM  |   Last Updated: 06th February 2020 03:33 PM   |  A+A-


Sourav Ganguly

ಸೌರವ್ ಗಂಗೂಲಿ

Posted By : Vishwanath S
Source : UNI

ನವದೆಹಲಿ: ನಾಲ್ಕು ರಾಷ್ಟ್ರಗಳ ಸರಣಿಗೆ ಮಹೂರ್ತ ನಿಗದಿ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಐಎಎನ್‌ಎಸ್ ಮೂಲಗಳ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್‌ ಮಂಡಳಿ ಜತೆ ಬಿಸಿಸಿಐ ಬಾಸ್ ಗಂಗೂಲಿ ಮಾತುಕತೆ ನಡೆಸಲಿದ್ದಾರೆ. ಇವರ ಜತೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಲಿದೆ ಎಂದು ತಿಳಿದುಬಂದಿದೆ.

ಮುಂದಿನ  ಪ್ರವಾಸದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ದೇಶಗಳ ಸರಣಿ ಆಯೋಜನೆ ಕುರಿತು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಜತೆ ಚರ್ಚೆ ನಡೆಸಲು ಗಂಗೂಲಿ ಲಂಡನ್‌ಗೆ ತೆರಳಿದ್ದಾರೆ.

"ಹೌದು, ಗಂಗೂಲಿ ಅವರು ಇಲ್ಲಿನ ಈಡನ್ ಗಾರ್ಡನ್ಸ್‌ ಅಂಗಳದಿಂದ ಲಂಡನ್‌ಗೆ ತೆರಳಿದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಹಾಗೂ ಸೌರವ್ ಗಂಗೂಲಿ ಅವರೊಂದಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಸೇರ್ಪಡೆಯಾಗಬಹುದು,'' ಎಂದು ಮೂಲಗಳು ತಿಳಿಸಿವೆ.

ಬಿಸಿಸಿಐ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಸೌರವ್ ಗಂಗೂಲಿ ಅವರು ಭಾರತದಲ್ಲಿ ಮೊಟ್ಟ ಮೊದಲ ಬಾರಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಯೋಜನೆ ಮಾಡಿದ್ದರು. ಇದಾದ ಬಳಿಕ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಮತ್ತೊಂದು ಅಗ್ರ ತಂಡದೊಂದಿಗೆ ನಾಲ್ಕು ದೇಶಗಳ ಸರಣಿಯನ್ನು ಪ್ರತಿ ವರ್ಷ ಆಯೋಜಿಸುವ ಬಗ್ಗೆ ಪ್ರಸ್ತಾವನೆ ಮಾಡಿದ್ದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp