'ಚೌಕಾಸಿ ಮಾಡಬೇಡಿ' ಪಾಕ್ ಮಾಜಿ ಕ್ರಿಕೆಟಿಗರೆಲ್ಲಾ ಈಗ ಯೂಟ್ಯೂಬ್ ಚಾನಲ್ ನಡೆಸುವಂತಾಗಿದೆ: ಅಖ್ತರ್ ಆಕ್ರೋಶ

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸರಿಯಾಗಿ ನಡೆಸಿಕೊಳ್ಳದ ಕಾರಣ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಯೂಟ್ಯೂಬ್ ಚಾನಲ್ ನಡೆಸಿ ಬದುಕುವಂತಾಗಿದೆ ಎಂದು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ದ್ರಾವಿಡ್-ಶೋಯೆಬ್ ಅಖ್ತರ್
ರಾಹುಲ್ ದ್ರಾವಿಡ್-ಶೋಯೆಬ್ ಅಖ್ತರ್

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಸರಿಯಾಗಿ ನಡೆಸಿಕೊಳ್ಳದ ಕಾರಣ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಯೂಟ್ಯೂಬ್ ಚಾನಲ್ ನಡೆಸಿ ಬದುಕುವಂತಾಗಿದೆ ಎಂದು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್ ಗಳಿಂದ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಂದಿದ್ದು ಈ ಸಂಬಂಧ ಪ್ರತಿಕ್ರಿಯಿಸಿರುವ ಶೋಯೆಬ್ ಅಖ್ತರ್ ಪಿಸಿಬಿ ನಿಮ್ಮ ಚೌಕಾಸಿ ತನದಿಂದಾಗಿ ಪಾಕ್ ಕಿರಿಯರ ತಂಡವೂ ದುರ್ಬಲವಾಗಿದೆ ಎಂದು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಆರೋಪಿಸಿದ್ದಾರೆ. 

ಅಂಡರ್ 19 ಭಾರತ ತಂಡವು ಅತ್ಯಂತ ಪ್ರಬುದ್ಧವಾಗಿದೆ. ಏಕೆಂದರೆ ಅವರಿಗೆ ಪ್ರಬುದ್ಧವಾದ ಕೋಚ್ ಇದ್ದಾರೆ. ಅವರು ಭಾರತದ ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್. ಇಂತಹ ಗ್ರೇಟ್ ಆಟಗಾರನಿಂದ ಅತ್ಯುತ್ತಮ ತಂಡವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 

ಪಾಕ್ ತಂಡಕ್ಕೂ ಇಂತಹ ಅತ್ಯುತ್ತಮ ಕೋಚ್ ಅನ್ನು ನೇಮಿಸಲು ಅದಕ್ಕೆ ತಕ್ಕಂತೆ ಹಣವನ್ನು ನೀಡಬೇಕಾಗುತ್ತದೆ. ಅದೇ ರೀತಿ ತಂಡಕ್ಕೆ ಕೋಚ್ ಆಗಲು ಬಂದ ಯೂನಿಸ್ ಖಾನ್ ರಂತ ಶ್ರೇಷ್ಠ ಆಟಗಾರನ ಬಳಿ ಚೌಕಾಸಿ ಮಾಡಿದ್ದಕ್ಕೆ ಅವರು ಕೋಚ್ ಹುದ್ದೆ ಬೇಡ ಎಂದು ಬರಬೇಕಾಯಿತು. ಹೀಗೇನಾ ನೀವೂ ಖ್ಯಾತ ಆಟಗಾರರನ್ನು ನಡೆಸಿಕೊಳ್ಳುವುದು ಎಂದು ಪ್ರಶ್ನಿಸಿದ್ದಾರೆ.

ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕ್ ತಂಡ ನಿಗದಿತ ಓವರ್ ನಲ್ಲಿ 172 ರನ್ ಗಳಿಗೆ ಆಲೌಟ್ ಆಗಿತ್ತು. ಈ ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕರಾದ ಜೈಸ್ವಾಲ್ ಅಜೇಯ್ 105 ಮತ್ತು ಸಕ್ಸೇನಾ ಅಜೇಯ 59 ರನ್ ಬಾರಿಸಿ ತಂಡಕ್ಕೆ 10 ವಿಕೆಟ್ ಗಳ ಭರ್ಜರಿ ಜಯ ತಂದುಕೊಟ್ಟಿದ್ದು ತಂಡ ಫೈನಲ್ ಪ್ರವೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com