'ಸರಣಿ ಸೋಲಿಗೆ ಸಮಜಾಯಿಷಿ' ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ ಸಮಾಧಾನವಿದೆ: ಕೊಹ್ಲಿ

ನ್ಯೂಜಿಲೆಂಡ್‌ನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 22 ರನ್‌ಗಳಿಂದ ಸೋತ, ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಬ್ಯಾಟ್ಸ್‌ಮನ್‌ಗಳನ್ನು ಹೊಗಳಿದ್ದಾರೆ. ಕಳಪೆ ಆರಂಭದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ್ದೇವೆ ಎಂದಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಆಕ್ಲೆಂಡ್: ನ್ಯೂಜಿಲೆಂಡ್‌ನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 22 ರನ್‌ಗಳಿಂದ ಸೋತ, ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಬ್ಯಾಟ್ಸ್‌ಮನ್‌ಗಳನ್ನು ಹೊಗಳಿದ್ದಾರೆ. ಕಳಪೆ ಆರಂಭದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ್ದೇವೆ ಎಂದಿದ್ದಾರೆ.  

ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಯಿಂದ ಗೆದ್ದ ನ್ಯೂಜಿಲೆಂಡ್, ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದು ಬೀಗಿದೆ. ಟಿ-20 ಸರಣಿಯ ಐದು ಪಂದ್ಯಗಳಲ್ಲಿ ಅನುಭಿಸಿದ್ದ ಸೋಲಿನ ಕಹಿಯನ್ನು ಕಿವೀಸ್ ಅಭಿಮಾನಿಗಳು ಮರೆಯುವಂತೆ ಮಾಡಿದೆ.

"ನಾವು ಆರಂಭಿಸಿದ ರೀತಿ ಮತ್ತು ತಂಡವು ಪಂದ್ಯವನ್ನು ಕೊನೆಯಲ್ಲಿ ಕೊನೆಗೊಳಿಸಿದ ರೀತಿಗೆ ನಾನು ಪ್ರಭಾವಿತನಾಗಿದ್ದೇನೆ. ಒಂದು ಹಂತದಲ್ಲಿ ಎಂಟು ವಿಕೆಟ್‌ಗಳಿಗೆ 197 ರನ್‌ಗಳಿಗೆ ಕುಸಿಯಿತು. ಮತ್ತು ಅಲ್ಲಿಂದ ನಾವು 250 ರನ್‌ಗಳವರೆಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮೊದಲಾರ್ಧದಲ್ಲಿ ನಮ್ಮ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೇವೆ. ನವದೀಪ್ ಸೈನಿ, ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ” ಎಂದು ವಿರಾಟ್ ತಿಳಿಸಿದ್ದಾರೆ.

"ಟೆಸ್ಟ್ ಮತ್ತು ಟಿ-20 ಗಳಿಗೆ ಹೋಲಿಸಿದರೆ ಈ ವರ್ಷ ಏಕದಿನ ಪಂದ್ಯಗಳಲ್ಲಿ ನಮ್ಮ ಸಾಧನೆ ಉತ್ತಮವಾಗಿಲ್ಲ. ಈ ಸಮಯದಲ್ಲಿ ನಾವು ಒತ್ತಡದಲ್ಲಿ ಆಡುತ್ತಿರುವ ಆಟಗಾರರನ್ನು ಗುರುತಿಸಿದ್ದೇವೆ. ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಮತ್ತು ಫಲಿತಾಂಶಗಳ ಬಗ್ಗೆ ಯೋಚಿಸುವುದಿಲ್ಲ. ಸೈನಿ ಬ್ಯಾಟಿಂಗ್‌ನಲ್ಲಿ ಹೇಗೆ ಪ್ರದರ್ಶನ ನೀಡಬಹುದೆಂದು ನಮಗೆ ತಿಳಿದಿರಲಿಲ್ಲ ಮತ್ತು ಕೆಳ ಕ್ರಮಾಂಕವು ಉತ್ತಮ ಪ್ರದರ್ಶನ ನೀಡಿದರೆ ಅದು ಮಧ್ಯಮ ಕ್ರಮಾಂಕ ಮತ್ತು ಮೇಲ್ಪಂಕ್ತಿಯ ಆಟಗಾರರ ಮೇಲೆ ಪರಿಣಾಮ ಬೀರಲಿದೆ” ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com