ರಿಷಬ್ ಪಂತ್ ರನ್ನು ನ್ಯೂಜಿಲೆಂಡ್ ಗೆ ಕರೆದುಕೊಂಡು ಹೋಗಿದ್ದು ಬೆಂಚ್ ಕಾಯುವುದಕ್ಕಾ?: ಡೆಲ್ಲಿ ಕ್ಯಾಪಿಟಲ್ಸ್ ಸಹ ಮಾಲೀಕ

ಜೆಎಸ್ ಡಬ್ಲ್ಯು ಸ್ಪೋರ್ಟ್ಸ್ ನಿರ್ದೇಶಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕ ಪರ್ತ್ ಜಿಂದಾಲ್ ಅವರು ರಿಷಬ್ ಪಂತ್ ಮತ್ತು ಆರ್ ಅಶ್ವಿನ್ ಅವರನ್ನು ಭಾರತದ ಸೀಮಿತ ಓವರ್ ತಂಡದಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ನವದೆಹಲಿ: ಜೆಎಸ್ ಡಬ್ಲ್ಯು ಸ್ಪೋರ್ಟ್ಸ್ ನಿರ್ದೇಶಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕ ಪರ್ತ್ ಜಿಂದಾಲ್ ಅವರು ರಿಷಬ್ ಪಂತ್ ಮತ್ತು ಆರ್ ಅಶ್ವಿನ್ ಅವರನ್ನು ಭಾರತದ ಸೀಮಿತ ಓವರ್ ತಂಡದಿಂದ ಹೊರಗಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಜಿಂದಾಲ್ ಅವರು, ಈ ಇವರಿಬ್ಬರನ್ನೂ "ಎಕ್ಸ್-ಫ್ಯಾಕ್ಟರ್" ಆಟಗಾರರು ಎಂದು ಬಣ್ಣಿಸಿದ್ದಾರೆ. ಅಲ್ಲದೆ ರಿಷಬ್ ಪಂತ್ ರನ್ನು ನ್ಯೂಜಿಲೆಂಡ್ ಗೆ ಕರೆದುಕೊಂಡು ಹೋಗಿದ್ದು ಬೆಂಚ್ ಕಾಯುವುದಕ್ಕಾ? ಎಂದು ಪ್ರಶ್ನಿಸಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದ ವೇಳೆ ಸೀಮಿತ್ ಓವರ್ ಗಳಲ್ಲಿ ಪಂತ್ ಆಡದಿರುವುದು ಅರ್ಥವಿಲ್ಲದ ನಿರ್ಧಾರ ಮತ್ತು ವಿಕೆಟ್ ಪಡೆಯುವ ಆರ್ ಅಶ್ವಿನ್ ಅವರ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ತಂಡ ವಿಫಲವಾಗಿದೆ ಎಂದು ಹೇಳಿದ್ದಾರೆ.

ವಿಶ್ವಕಪ್ ನಂತರ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಸರಿದ ಬಳಿಕ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಪರಿಗಣಿಸಲಾಗಿತ್ತು, ಆದರೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರು ಕೇವಲ ಪ್ರೇಕ್ಷಕರಾಗಿ ಉಳಿದಿದ್ದಾರೆ ಮತ್ತು ಇಲ್ಲಿಯವರೆಗೆ ಎಂಟು ಪಂದ್ಯಗಳಲ್ಲಿ ಅವರು ಒಂದು ಪಂದ್ಯದಲ್ಲೂ ಆಡಲು ಅವಕಾಶ ಪಡೆದಿಲ್ಲ. 

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್ಸ್ನಲ್ಲಿ ಭಾರತವು ನ್ಯೂಜಿಲೆಂಡ್‌ ವಿರುದ್ಧ ಸೋಲು ಕಂಡಿತು. ಇದೇ ಪಂದ್ಯದಲ್ಲಿ ಎಂಎಸ್ ಧೋನಿ ಕೊನೆಯ ಓವರ್ ನಲ್ಲಿ ರನ್ ಔಟ್ ಆದರು. ಅಂದಿನಿಂದ ಧೋನಿ ಭಾರತೀಯ ತಂಡದಿಂದ ಹೊರಗಿದ್ದಾರೆ. ಅಲ್ಲದೆ, ಆಗಿನ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಕೂಡ ತಂಡದ ಗಮನವು ಭವಿಷ್ಯದ ಆಟಗಾರರತ್ತ ನೆಟ್ಟಿದ್ದು, ಪಂತ್ ಅವರ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಸ್ಪಷ್ಟಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com