81 ರನ್ ಕಳಪೆ ಎಂದು ಭಾವಿಸಲ್ಲ, ಟೆಸ್ಟ್‌ ಸರಣಿಯಲ್ಲೂ ಇದೇ ರೀತಿ ಆಡುತ್ತೇನೆ: ಮಯಾಂಕ್‌ ಅಗರ್ವಾಲ್

ನ್ಯೂಜಿಲೆಂಡ್‌ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್‌ ಅಗರ್ವಾಲ್‌ 99 ಎಸೆತಗಳಲ್ಲಿ 81 ರನ್‌ ಗಳಿಸಿ ಮಿಂಚಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

Published: 16th February 2020 12:54 PM  |   Last Updated: 16th February 2020 12:54 PM   |  A+A-


Mayank Agarwal

ಮಾಯಾಂಕ್ ಅಗರವಾಲ್

Posted By : Vishwanath S
Source : UNI

ಹ್ಯಾಮಿಲ್ಟನ್‌: ನ್ಯೂಜಿಲೆಂಡ್‌ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್‌ ಅಗರ್ವಾಲ್‌ 99 ಎಸೆತಗಳಲ್ಲಿ 81 ರನ್‌ ಗಳಿಸಿ ಮಿಂಚಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಲಯಕ್ಕೆ ಮರಳಿರುವ ಮಯಾಂಕ್‌ ಅಗರ್ವಾಲ್‌ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ, ನನ್ನ ಬ್ಯಾಟಿಂಗ್‌ಗೆ ಅಗತ್ಯವಾದ ಕಡೆಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸಿದ್ದೇನೆ.  ಇಲ್ಲಿನ ವಾತಾವರಣದಲ್ಲಿ ಆಡುವುದು ವಿಭಿನ್ನತೆಯಿಂದ ಕೂಡಿದೆ. ಆದರೆ ಈ ಹಿಂದೆ ನಡೆದಿರುವ ಅಂಶಗಳನ್ನು ಮರೆತು ಆಡುತ್ತೇನೆ. ಅಭ್ಯಾಸ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 81 ರನ್‌ ಗಳಿಸಿದ್ದೇನೆ. ಟೆಸ್ಟ್ ಪಂದ್ಯದಕ್ಕೆ ಇದನ್ನು ವಿಶ್ವಾಸವಾಗಿ ಪರಿಗಣಿಸುತ್ತೇನೆ ಎಂದು ಹೇಳಿದ್ದಾರೆ.

ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಅವರ ಸಹಾಯದಿಂದ ನನಗೆ ಅಗತ್ಯವಾದ ತಾಂತ್ರಿಕ ಕೌಶಲಗಳ ಮೇಲೆ ಹೆಚ್ಚಿನ ಗಮನ ಹರಿಸಿದ್ದೇನೆ ಎಂದು ಮಯಾಂಕ್‌ ಉಲ್ಲೇಖಿಸಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp