ಮುಂಬೈಯಲ್ಲಿ ದುಬಾರಿ ಬಾಡಿಗೆ: ಬೆಂಗಳೂರಿನಲ್ಲಿ ಭಾರತೀಯ ಕ್ರಿಕೆಟಿಗರ ಸಂಘದ ಕಚೇರಿ ಸ್ಥಾಪನೆ ಸಾಧ್ಯತೆ 

ವಾಣಿಜ್ಯ ನಗರಿ ಮುಂಬೈಯಲ್ಲಿನ ಭಾರತೀಯ ಕ್ರಿಕೆಟಿಗರ ಸಂಘದ  ಕಚೇರಿಗಾಗಿ ದುಬಾರಿ ಬಾಡಿಗೆ ವ್ಯಯವಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಅದರ ಕಚೇರಿ ಸ್ಥಾಪನೆಯಾಗುವ ಸಾಧ್ಯತೆ ಇದೆ.
ಕಪಿಲ್ ದೇವ್
ಕಪಿಲ್ ದೇವ್

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿನ ಭಾರತೀಯ ಕ್ರಿಕೆಟಿಗರ ಸಂಘದ  ಕಚೇರಿಗಾಗಿ ದುಬಾರಿ ಬಾಡಿಗೆ ವ್ಯಯವಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಅದರ ಕಚೇರಿ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ರೂಪುಗೊಂಡ ಭಾರತದ ಮೊಟ್ಟಮೊದಲ ಆಟಗಾರರ ಸಂಘವಾದ ಐಸಿಎಗೆ ತನ್ನ ಕಾರ್ಯಾಚರಣೆಯನ್ನು ಆರಂಭಿಸಲು ಬಿಸಿಸಿಐ ಭಾನುವಾರ 2 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.

ಮುಂಬೈಯಲ್ಲಿ ಕಚೇರಿಗಾಗಿ ದುಬಾರಿ ವೆಚ್ಚವಾಗುತ್ತಿದ್ದು, ಕಚೇರಿಗೆ ಸೂಕ್ತ ಜಾಗ ಸಿಗದೆ ಇರುವುದರಿಂದ ಮುಂದಿನ ಹತ್ತು- ಹದಿನೈದು ದಿನಗಳಲ್ಲಿ ಬೆಂಗಳೂರಿನಲ್ಲಿ ಕಚೇರಿಯನ್ನು ಸ್ಥಾಪಿಸಲು ಎದುರು ನೋಡಲಾಗುತ್ತಿದೆ ಎಂದು ಇಂದು ನಡೆದ ಸಭೆಯ ಬಳಿಕ ಭಾರತೀಯ ಕ್ರಿಕೆಟಿಗರ ಸಂಘದ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದರು.

ಐಸಿಎ ತಾತ್ಕಾಲಿಕವಾಗಿ 15-20 ಕೋಟಿ ಬಜೆಟ್ ನ್ನು ಸಿದ್ಧಪಡಿಸಿತ್ತು. ಪ್ರಾಥಮಿಕ ಹಂತದಲ್ಲಿ 5 ಕೋಟಿ ಪಡೆಯಲು ಬಯಸಲಾಗಿತ್ತು. ಆದರೆ, 2 ಕೋಟಿಯನ್ನು ಪಡೆದುಕೊಂಡಿದೆ. ಖಜಾಂಚಿ ಕೃಷ್ಣಮೂರ್ತಿ ಬೆಂಗಳೂರು ಮೂಲದವರಾಗಿದ್ದು, ಪರ್ಯಾಯವಾಗಿ ಅಲ್ಲಿ ಕಚೇರಿ ಸ್ಥಾಪಿಸಲು ಐಸಿಎ ಮುಂದಾಗಿದೆ. 

ನಿಧಿ ಸಂಗ್ರಹ ಕುರಿತಂತೆ ಪ್ರತಿಕ್ರಿಯಿಸಿದ ಹಿರಿಯ ಅಧಿಕಾರಿಯೊಬ್ಬರು, ಸಭೆಯಲ್ಲಿ ಅನೇಕ ಮಾರ್ಗಗಳ ಕುರಿತಂತೆ ಚರ್ಚೆ ನಡೆಸಲಾಗಿದೆ. ಆದರೆ,  ಕಚೇರಿ ಸ್ಥಾಪನೆಗೆ ಕೆಲ ದಿನಗಳ ಅಗತ್ಯವಿರುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com