ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ, ತಂಡ ಸೇರಿದ ಮನೀಷ್, ಕರುಣ್ ನಾಯರ್

ಫೆ.20 ರಿಂದ ಜಮ್ಮು ಕಾಶ್ಮೀರದಲ್ಲಿ ಜಮ್ಮು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಕರುಣ್ ನಾಯರ್ ಅವರಿಗೆ ತಂಡದ ಚುಕ್ಕಾಣಿ ನೀಡಲಾಗಿದೆ.

Published: 17th February 2020 11:51 PM  |   Last Updated: 18th February 2020 12:00 AM   |  A+A-


Karnataka team for the Quarter Finals against J&K announced

ಸಂಗ್ರಹ ಚಿತ್ರ (ಕರ್ನಾಟಕ ರಣಜಿ ಚಿತ್ರ)

Posted By : Srinivasamurthy VN
Source : UNI

ಬೆಂಗಳೂರು: ಫೆ.20 ರಿಂದ ಜಮ್ಮು ಕಾಶ್ಮೀರದಲ್ಲಿ ಜಮ್ಮು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಕರುಣ್ ನಾಯರ್ ಅವರಿಗೆ ತಂಡದ ಚುಕ್ಕಾಣಿ ನೀಡಲಾಗಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಸೊಗಸಾದ ಪ್ರದರ್ಶನ ನೀಡಿದ ಮನೀಷ್ ಪಾಂಡೆ, ಕರುಣ್ ನಾಯರ್ ತಂಡ ಸೇರಿಕೊಂಡಿದ್ದಾರೆ. ಇವರ ಆಗಮನದಿಂದ ರಾಜ್ಯ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೆ ಬಲ ಬಂದಂತಾಗಿದೆ. ವಿ.ಕೌಶಿಕ, ಪ್ರವೀಣ್ ದುಬೆ, ಡಿ.ನಿಶ್ಚಲ್ ಅವರು ಸ್ಥಾನ ವಂಚಿರಾಗಿದ್ದಾರೆ. ಪ್ರತೀಕ್ ಜೈನ್, ಆಲ್ ರೌಂಡರ್ ಜೆ.ಸುಚಿತ್ ಸಹ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಣ ಕ್ವಾರ್ಟರ್ ಫೈನಲ್ ಪಂದ್ಯ ಗಾಂಧಿ ಮೆಮೋರಿಯಲ್ ಕಾಲೇಜ್ ಮೈದಾನ, ಜಮ್ಮುವಿನಲ್ಲಿ ನಡೆಯಲಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp