ಟಿ20 ವಿಶ್ವಕಪ್‌: ಯುವ ಭಾರತೀಯ ಪಡೆಯೇ ಉನ್ನತ ಸ್ಪರ್ಧಿ - ನಾಯಕಿ ಹರ್ಮನ್‌ಪ್ರೀತ್‌ ಕೌರ್‌

ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲು ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಭಾರತ ತಂಡ ದಿನದಿಂದ ದಿನಕ್ಕೆ ಸುಧಾರಣೆ ಕಂಡುಕೊಳ್ಳುತ್ತಿದೆ ಎಂದು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ತಿಳಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್
ಹರ್ಮನ್ ಪ್ರೀತ್ ಕೌರ್

ಸಿಡ್ನಿ: ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲು ಇನ್ನು ಒಂದು ವಾರ ಮಾತ್ರ ಬಾಕಿಯಿದೆ. ಭಾರತ ತಂಡ ದಿನದಿಂದ ದಿನಕ್ಕೆ ಸುಧಾರಣೆ ಕಂಡುಕೊಳ್ಳುತ್ತಿದೆ ಎಂದು ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ತಿಳಿಸಿದ್ದಾರೆ.

ಮುಂದಿನ ಶುಕ್ರವಾರ ಭಾರತ ಮಹಿಳಾ ತಂಡ ಇಲ್ಲಿನ ಸಿಡ್ನಿ ಶೋಗ್ರೌಂಡ್ ಅಂಗಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿದೆ. ಕಳೆದ 2017ರ ವಿಶ್ವಕಪ್ ರೀತಿ ಪ್ರದರ್ಶನ ತೋರಲು ತಂಡ ಉತ್ಸುಕವಾಗಿದೆ. ಅಂದು ಭಾರತ ಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಸೋಲು ಅನುಭವಿಸಿತ್ತು.

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೂರು ಬಾರಿ ಸೆಮಿಫೈನಲ್ ಹಣಾಹಣಿಯಲ್ಲಿ ಸೋಲು ಅನುಭವಿಸಿತ್ತು. ಆದರೆ, ಒಮ್ಮೆಯೂ ಫೈನಲ್ ತಲುಪಿರಲಿಲ್ಲ. ವೆಸ್ಟ್ ಇಂಡೀಸ್ ನಲ್ಲಿ ಕಳೆದ 2018ರ ಆವೃತ್ತಿಯಲ್ಲಿ 2009ರ ಚಾಂಪಿಯನ್ ಇಂಗ್ಲೆಂಡ್ ಗೆ ಎಂಟು ವಿಕೆಟ್ ಗೆ ಮಣಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com