ಇದೇ ಕ್ಷಮತೆಯೊಂದಿಗೆ ಮುಂದಿನ 2-3 ವರ್ಷ ಆಡಬಹುದು: ವಿರಾಟ್ ಕೊಹ್ಲಿ

ಮುಂದಿನ ಎರಡು-ಮೂರು ವರ್ಷಗಳವರೆಗೆ ಈ ಸಾಮರ್ಥ್ಯದೊಂದಿಗೆ ಆಡಬಹುದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವೆಲ್ಲಿಂಗ್ಟನ್: ಬಿಡುವಿಲ್ಲದ ವೇಳಾಪಟ್ಟಿಯ ಮಧ್ಯೆ ನಿಯಮಿತವಾಗಿ ವಿಶ್ರಾಂತಿ ಪಡೆಯುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಲು ಸಹಾಯವಾಗಿದ್ದು, ಮುಂದಿನ ಎರಡು-ಮೂರು ವರ್ಷಗಳವರೆಗೆ ಈ ಸಾಮರ್ಥ್ಯದೊಂದಿಗೆ ಆಡಬಹುದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರದಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮುನ್ನ ಬುಧವಾರ ವಿರಾಟ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.

“ನಾನು ಕಳೆದ ಎಂಟು ಅಥವಾ ಒಂಬತ್ತು ವರ್ಷಗಳಿಂದ ಪ್ರಯಾಣ ಮತ್ತು ಅಭ್ಯಾಸದ ಅವಧಿಗಳು ಸೇರಿದಂತೆ ವರ್ಷದಲ್ಲಿ ಸುಮಾರು 300 ದಿನ ಕ್ರಿಕೆಟ್ ಆಡುತ್ತಿದ್ದೇನೆ. ಸ್ವಾಭಾವಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀಳುವ ಪೂರ್ಣ ಸಾಮರ್ಥ್ಯವನ್ನು ನೀವು ನಿರ್ವಹಿಸಬೇಕು. ಅದು ಅಷ್ಟು ಸುಲಭವಲ್ಲ" ಎಂದಿದ್ದಾರೆ.

“ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಾವು ವೈಯಕ್ತಿಕವಾಗಿ ಸಮಯ ತೆಗೆದುಕೊಳ್ಳುತ್ತೇವೆ ಮತ್ತು ವಿಶ್ರಾಂತಿ ಪಡೆಯುತ್ತೇವೆ. ಮುಂದಿನ ದಿನಗಳಲ್ಲಿ, ಮೂರು ಸ್ವರೂಪಗಳಲ್ಲಿ ಆಡುತ್ತಿರುವ ಇತರ ಅನೇಕ ಆಟಗಾರರು ಸಹ ಅಂತಹ ವಿಧಾನವನ್ನು ಅಳವಡಿಸಿಕೊಳ್ಳಬಹುದು” ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com