ವೆಲ್ಲಿಂಗ್ಟನ್‌ ಟೆಸ್ಟ್: ಎರಡೂ ಇನಿಂಗ್ಸ್‌ಗಳಲ್ಲಿ ಕೈಕೊಟ್ಟ ಪೃಥ್ವಿ ಶಾ, ವಿರಾಟ್ ಕೊಹ್ಲಿ

ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರೊಂದಿಗೆ ಮತ್ತೊಂದು ತುದಿಯಲ್ಲಿ ಇನಿಂಗ್ಸ್ ಆರಂಭಿಸಲು ಮತ್ತೊಬ್ಬ ಯುವ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್‌ ಅವರೊಂದಿಗೆ ಪೃಥ್ವಿ ಶಾ ಪೈಪೋಟಿ ಎದುರಿಸಿ ಕೊನೆಗೂ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದರು.
ಕೊಹ್ಲಿ-ಪೃಥ್ವಿ ಶಾ
ಕೊಹ್ಲಿ-ಪೃಥ್ವಿ ಶಾ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರೊಂದಿಗೆ ಮತ್ತೊಂದು ತುದಿಯಲ್ಲಿ ಇನಿಂಗ್ಸ್ ಆರಂಭಿಸಲು ಮತ್ತೊಬ್ಬ ಯುವ ಬ್ಯಾಟ್ಸ್‌ಮನ್‌ ಶುಭಮನ್ ಗಿಲ್‌ ಅವರೊಂದಿಗೆ ಪೃಥ್ವಿ ಶಾ ಪೈಪೋಟಿ ಎದುರಿಸಿ ಕೊನೆಗೂ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದರು. ಆದರೆ, ಯುವ ಬ್ಯಾಟ್ಸ್‌ಮನ್ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 16 ಮತ್ತು 14 ರನ್ ಗಳಿಸಿ ವಿಫಲರಾಗುವ ಮೂಲಕ ಸಿಕ್ಕಿದ್ದ ಅವಕಾಶವನ್ನು ಕೈಚೆಲ್ಲಿಕೊಂಡಿದ್ದಾರೆ.

ಎಂಟನೇ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಎಸೆದ ಚೆಂಡು ಲೆಗ್ ವಿಕೆಟ್‌ನಿಂದ ಹೊರಗಡೆ ಸಾಗುತ್ತಿತ್ತು. ಈ ವೇಳೆ ಪೃಥ್ವಿ ಶಾ ಅವರ ನೇರವಾಗಿ ಆಡುವ ಬದಲು ಎಡ ಬದಿಗೆ ಬ್ಯಾಟ್‌ನಲ್ಲಿ ತಿರುಗಿಸಲು ಹೋಗಿ ಶಾರ್ಟ್‌ ಲೆಗ್‌ನಲ್ಲಿದ್ದ ವ್ಯಾಟ್ಲಿಂಗ್‌ಗೆ ಕ್ಯಾಚ್‌ ನೀಡಿದರು. 19 ವಯೋಮಿತಿ ವಿಶ್ವಕಪ್‌ ವಿಜೇತ ನಾಯಕ ಎರಡು ಬೌಂಡರಿ ಬಾರಿಸಿದ್ದರಾದರೂ ಕ್ರೀಸ್‌ನಲ್ಲಿ ಎರಡನೇ ಬಾರಿ ಉಳಿಯುವಲ್ಲಿ ವಿಫಲರಾದರು.

ಮೊದಲನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್‌ ಎಲೆವೆನ್‌ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಸ್ಥಾನ ಆಕಾಂಕ್ಷಿಗಳಾದ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಇಬ್ಬರೂ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಆದರೂ, ದೀರ್ಘಾವಧಿ ಮಾದರಿಯಲ್ಲಿ ಪೃಥ್ವಿ ಶಾ ಉತ್ತಮವಾಗಿದ್ದರಿಂದ ಅವರಿಗೆ ಮೊದಲನೇ ಟೆಸ್ಟ್ ಪಂದ್ಯಕ್ಕೆ ಸ್ಥಾನ ಕಲ್ಪಿಸಲಾಯಿತು.

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಹ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 2 ರನ್ ಗಳಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ 19 ರನ್ ಗಳಿಸಿ ಔಟಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com