ಏಕದಿನ ಕ್ರಿಕೆಟ್: ಹತ್ತು ವರ್ಷದಲ್ಲಿ 10 ದ್ವಿತಕ, ಭಾರತೀಯರದ್ದೇ ಪಾರುಪತ್ಯ!

ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಮೊಟ್ಟ ಮೊದಲ ದ್ವಿಶತಕ ದಾಖಲಾದ ಬಳಿಕ ಈ ವರೆಗೂ ಒಟ್ಟಾರೆ 10 ದ್ವಿಶತಕಗಳು ದಾಖಲಾಗಿದ್ದು, ಈ ಪೈಕಿ ಐದು ದ್ವಿಶತಕಗಳು ಭಾರತೀಯರಿಂದಲೇ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಮೊಟ್ಟ ಮೊದಲ ದ್ವಿಶತಕ ದಾಖಲಾದ ಬಳಿಕ ಈ ವರೆಗೂ ಒಟ್ಟಾರೆ 10 ದ್ವಿಶತಕಗಳು ದಾಖಲಾಗಿದ್ದು, ಈ ಪೈಕಿ ಐದು ದ್ವಿಶತಕಗಳು ಭಾರತೀಯರಿಂದಲೇ ಬಂದಿದೆ.

ಹೌದು.. ಸಚಿನ್ ತೆಂಡೂಲ್ಕರ್ ದ್ವಿಶತಕ ಗಳಿಸಿದ ದಿನದಿಂದ ಇಂದಿನವರೆಗೂ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹತ್ತು ದ್ವಿಶತಕಗಳು ದಾಖಲಾಗಿವೆ. ಇದರಲ್ಲಿ ಐದು ದ್ವಿಶತಕಗಳನ್ನು ಭಾರತೀಯರೇ ಬಾರಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಸಚಿನ್ ತೆಂಡೂಲ್ಕರ್ ಜೊತೆಗೆ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಕೂಡ ಈ ಸಾಧನೆ ಮಾಡಿದ್ದಾರೆ.

ಇನ್ನು ಈ ದ್ವಿಶತಕಗಳ ಪಟ್ಟಿಯಲ್ಲೂ ಭಾರತೀಯ ಆಟಗಾರರ ಪಾರಮ್ಯ ಮೆರೆದಿದ್ದು, 10 ದ್ವಿಶತಕಗಳ ಪೈಕಿ 5 ದ್ವಿಶತಕಗಳು ಭಾರತೀಯ ಆಟಗಾರರ ಬ್ಯಾಟ್ ನಿಂದ ಹರಿದಿದೆ. ಏಕದಿನ ಇತಿಹಾಸದಲ್ಲಿ ಮೊದಲ ದ್ವಿಶತಕ ಕಾಣಲು ನಾಲ್ಕು ದಶಕ ಬೇಕಾಗಿತ್ತು. ಆದರೆ ಟೀಮ್ ಇಂಡಿಯಾದ ಆಟಗಾರನೊಬ್ಬ ಒಂದೇ ವರ್ಷದ ಅಂತರದಲ್ಲಿ ಎರಡೆರಡು ದ್ವಿಶತಕವನ್ನು ಬಾರಿಸಿ ಅಚ್ಚರಿ ಮೂಡಿಸಿದರು. ಅದು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ರೋಹಿತ್ ಶರ್ಮಾ.  ರೋಹಿತ್ ಈ ವರೆಗೂ 3 ದ್ವಿಶತಕಗಳನ್ನು ಬಾರಿಸಿದ್ದು, 2013ರ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ 209ರನ್ ಗಳಿಸಿದ್ದರು. ಇದಾದ ಬಳಿಕ ರೋಹಿತ್ ಶ್ರೀಲಂಕಾ ವಿರುದ್ಧ ಬಾರಿಸಿದ 264 ರನ್ ಏಕದಿನ ಇತಿಹಾಸದಲ್ಲಿ ಬಾರಿಸಿದ ಅತಿದೊಡ್ಡ ವೈಯಕ್ತಿಕ ಮೊತ್ತವಾಗಿದೆ.

ಮತ್ತೆ ರೋಹಿಚ್ ಶರ್ಮಾ ಶ್ರೀಲಂಕಾ ವಿರುದ್ಧ 2017ರಲ್ಲಿ ಅಜೇಯ 208 ರನ್ ಗಳಿಸಿದ್ದರು. 2011ರಲ್ಲಿ ಭಾರತದ ಮತ್ತೋರ್ವ ಸ್ಫೋಟಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಗಳಿಸಿದ್ದರು. ಭಾರತೀಯರನ್ನು ಹೊರತು ಪಡಿಸಿದಂತೆ, 2015ರಲ್ಲಿ ವಿಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಯ್ಲ್ (215 ರನ್, ಅತಿವೇಗದ ದ್ವಿಶತಕ), ಪಾಕಿಸ್ತಾನದ ಫಖರ್ ಜಮಾನ್ (210 ರನ್, 2018ರಲ್ಲಿ ಜಿಂಬಾಬ್ವೆ ವಿರುದ್ಧ), ಅಮೆಲಿಯಾ ಕೆರ್ (232 ರನ್, ಐರ್ಲೆಂಡ್ ವಿರುದ್ಧ, 2018), ನ್ಯೂಜಿಲೆಂಡ್ ನ ಮಾರ್ಟಿನ್ ಗಪ್ಟಿಲ್ (237ರನ್, ವೆಸ್ಟ್ ಇಂಡೀಸ್ ವಿರುದ್ಧ 2015ರಲ್ಲಿ) ದ್ವಿಶತಕ ಗಳಿಸಿದ್ದಾರೆ.

ವಿಶ್ವದ ಮೊಟ್ಟ ಮೊದಲ ಏಕದಿನ ದ್ವಿಶತಕ ಗಳಿಸಿದ್ದ ಈ ಆಸಿಸ್ ಆಟಗಾರ್ತಿ
ಇನ್ನು ಸಚಿನ್ ಗಿಂತಲೂ ಮೊದಲೇ ಏಕದಿನ ಮಾದರಿಯಲ್ಲಿ ದ್ಲಿಶತಕ ಭಾರಿಸಿದ ಕೀರ್ತಿ ಮಾತ್ರ ಆಸ್ಚ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಗೆ ಸಲ್ಲುತ್ತದೆ. 1997ರಲ್ಲಿ ನಡೆದ ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ ಕ್ಲಾರ್ಕ್ ಅಜೇಯ 229ರನ್ ಸಿಡಿಸಿದ್ದರು.  ಇದು ಏಕದಿನ ಕ್ರಿಕೆಟ್ ಜಗತ್ತಿನ ಮೊಟ್ಟ ಮೊದಲ ಏಕದಿನ ದ್ವಿಶತಕವಾಗಿ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com