ಸ್ಪರ್ಧಾತ್ಮಕ ಕ್ರಿಕೆಟ್ ಆಡುವಲ್ಲಿ ವಿಫಲ: ಕಿವೀಸ್ ವಿರುದ್ಧದ ಸೋಲನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ

ನ್ಯೂಜಿಲೆಂಡ್‌ ವಿರುದ್ಧ 10 ವಿಕೆಟ್‌ಗಳ ಸೋಲು ಅನುಭವಿಸಿದ ಭಾರತ ತಂಡದ ನೀರಸ ಪ್ರದರ್ಶನವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧ 10 ವಿಕೆಟ್‌ಗಳ ಸೋಲು ಅನುಭವಿಸಿದ ಭಾರತ ತಂಡದ ನೀರಸ ಪ್ರದರ್ಶನವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ.ಇಲ್ಲಿನ ಬೇಸಿನ್ ರಿವರ್ ಅಂಗಳದಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ 1-0 ಮುನ್ನಡೆ ಪಡೆದಿದೆ.

ಈ ಪಂದ್ಯದಲ್ಲಿ ನಾವು ಸ್ಪರ್ಧಾತ್ಮಕ ಕ್ರಿಕೆಟ್ ಆಡುವಲ್ಲಿ ವಿಫಲವಾಗಿದ್ದೇವೆ. ಈ ಹಿಂದೆ  ಒಳ್ಳೆಯ ಕ್ರಿಕೆಟ್ ಆಡಿರುವುದೂ ನಮಗೆ ಗೊತ್ತಿದೆ.  ನಾವು ಪಂದ್ಯ ಸೋತರೂ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರಬೇಕು ಎಂದು ಕೊಹ್ಲಿ ಹೇಳಿದರು.

ನಾವು ಚೆನ್ನಾಗಿ ಆಡಿಲ್ಲವೆಂಬ ಸ್ಪಷ್ಟವಾದ ಮನವರಿಕೆಯಿದೆ. ಆದರೆ, ಜನರು ಇದನ್ನು ದೊಡ್ಡದಾಗಿ ಚಿತ್ರಿಸಲು ಬಯಸಿದರೆ ಬೃಹತ್ ಪರ್ವತವನ್ನೇ ಮಾಡಬಹುದಾಗಿದೆ. ಆದರೆ, ನಾವು ಆ ರೀತಿಯಲ್ಲಿ ಯೋಚಿಸಿಲ್ಲ, ಉತ್ತಮ ರೀತಿಯಲ್ಲಿ ಕ್ರಿಕೆಟ್ ಆಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಕೇವಲ ಒಂದು ಸೋಲಿನಿಂದ ರಾತ್ರೋ ರಾತ್ರಿ ಕೆಟ್ಟ ತಂಡವಾಗುವುದಿಲ್ಲ ಎಂದರು.

ನ್ಯೂಜಿಲೆಂಡ್ ಬೌಲಿಂಗ್ ವಿಭಾಗವು ವೈವಿಧ್ಯತೆಯನ್ನು ಹೊಂದಿದೆ. ವೆಲ್ಲಿಂಗ್ಟನ್ ಪಿಚ್ ವಿಚಿತ್ರವಾಗಿ ವರ್ತಿಸುತಿತ್ತು. ಹಾಗಾಗಿ ನಾವು ಅಂದುಕೊಂಡಂತೆ ಆಡಲು ಸಾಧ್ಯವಾಗುತ್ತಿರಲಿಲ್ಲ. ವೇಗದ ಕೊರತೆ ನಮಗೆ ತೊಂದರೆಯಾಯಿತು. ಎದುರಾಳಿಗಳು ನಮ್ಮಗಿಂತಲೂ ಉತ್ತಮ ಕ್ರಿಕೆಟ್ ಆಡಿದ್ದಾರೆ . ಈ ತಪ್ಪಿನಿಂದ ಪಾಠ ಕಲಿತು ಮುಂದೆ ಉತ್ತಮ ಪ್ರದರ್ಶನ ನೀಡುವುದು ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯಾಗಿದೆ ಎಂದರು.

ಸೋಲು- ಗೆಲುವು ಸಹಜ. ಆದರೆ, ನಮ್ಮ ತಂಡವು ಹೊರಗಿನ ವಿಚಾರಗಳ ಬಗ್ಗೆ ಗಮನ ನೀಡುವುದಿಲ್ಲ. ಇಲ್ಲಿಂದ ಪಾಠ ಕಲಿತು ಮುಂದಿನ ಪಂದ್ಯದಲ್ಲಿ ಚೆನ್ನಾಗಿ ಆಡಲಿದ್ದೇವೆ. ಮುಂದಿನ ಪಂದ್ಯ ಗೆಲ್ಲಲು  ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ವಿರಾಟ್ ಕೊಹ್ಲಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com