ಐಸಿಸಿ ಮಹಿಳಾ ಟಿ20 ವಿಶ್ವಕಪ್: ಸೋಲಿನ ಸುಳಿಯಲ್ಲಿದ್ದರೂ 'ಮಂಕಡ್ ರನೌಟ್' ಮಾಡದ ಬೌಲರ್, ವಿಡಿಯೋ ವೈರಲ್!

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ತಂಡ ಸೋಲಿನ ಸುಳಿಯಲ್ಲಿದ್ದರೂ ಎದುರಾಳಿ ತಂಡದ ಬ್ಯಾಟ್ಸ್ ಮನ್ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದರು. ಮಂಕಡ್ ರನೌಟ್ ಮಾಡದೇ ಕ್ರೀಡಾ ಸ್ಪೂರ್ತಿ ಮೆರೆದಿದ್ದು ಟ್ವೀಟರಿಗರು ಆರ್ ಅಶ್ವಿನ್ ರ ಕಾಳೆಯುತ್ತಿದ್ದಾರೆ.
ನೈಜ್ಯ ಚಿತ್ರ

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾಗೆ ಗೆಲ್ಲಲು 4 ಎಸೆತಗಳಲ್ಲಿ 7 ರನ್ ಬೇಕಿತ್ತು. ಈ ವೇಳೆ ಇಂಗ್ಲೆಂಡ್ ಬೌಲರ್ ಕ್ಯಾಥರೀನ್ ಬ್ರಂಟ್ ಬೌಲಿಂಗ್ ಮಾಡುತ್ತಿದ್ದು ನಾನ್ ಸ್ಟ್ರೈಕ್ ನಲ್ಲಿದ್ದ ಆಫ್ರಿಕಾದ ಸುನೆ ಲೂಸ್ ಕ್ರೀಸ್ ಬಿಟ್ಟು ಮುಂದೆ ಬಂದಿದ್ದರು. ಈ ವೇಳೆ ಬ್ರಂಟ್ ರನೌಟ್ ಮಾಡದೆ ಹಿಂದಕ್ಕೆ ಹೋದರು. ನಂತರದ ಎಸೆತದಲ್ಲಿ ಆಫ್ರಿಕಾ ಆಟಗಾರ್ತಿ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 

ಸದ್ಯ ಬ್ರಂಟ್ ಅವರ ಕ್ರೀಡಾ ಸ್ಪೂರ್ತಿಗೆ ನೆಟಿಗರು ಫಿದಾ ಆಗಿದ್ದಾರೆ. ಯಾವುದೇ ಆಟಗಾರರಿರಲಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು ಕೆಲವೊಮ್ಮೆ ಕ್ರೀಡಾಸ್ಪೂರ್ತಿ ಮರೆತು ಆಡುತ್ತಾರೆ ಅದಕ್ಕೆ ವ್ಯತಿರೀಕ್ತ ನಡೆ ಇದು ಎಂದು ಶ್ಲಾಘಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com