ಪ್ರಧಾನಿ ಮೋದಿ ಅಧಿಕಾರದಲ್ಲಿ ಇರೋವರೆಗೂ ಭಾರತ-ಪಾಕ್ ಟೂರ್ನಿ ನಡೆಯಲು ಬಿಡಲ್ಲ: ಆಫ್ರಿದಿ

ಪ್ರಧಾನಿ ಮೋದಿ ಅಧಿಕಾರದಲ್ಲಿ ಇರೋವರೆಗೂ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಬಿಡುವುದಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಹೇಳಿದ್ದಾರೆ.
ಮೋದಿ-ಆಫ್ರಿದಿ
ಮೋದಿ-ಆಫ್ರಿದಿ

ಇಸ್ಲಾಮಾಬಾದ್: ಪ್ರಧಾನಿ ಮೋದಿ ಅಧಿಕಾರದಲ್ಲಿ ಇರೋವರೆಗೂ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಡೆಯಲು ಬಿಡುವುದಿಲ್ಲ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಐಸಿಸಿ ಹಾಗೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಎದುರಾಗುತ್ತಿವೆ. 2012ರಿಂದಿಂಚೆಗೆ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಈ ಬಗ್ಗೆ ಐಸಿಸಿಗೆ ಮನವಿ ಮಾಡಿದರೂ ಸ್ಪಂಧಿಸುತ್ತಿಲ್ಲ. ಅತ್ತ ಬಿಸಿಸಿಐ ಸಹ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದರು. 

ಭಾರತ-ಪಾಕ್ ನಡುವೆ ಸರಣಿ ನಡೆಯದಿರಲು ಪ್ರಧಾನಿ ಮೋದಿ ಕಾರಣ. ಅವರು ಅಧಿಕಾರದಲ್ಲಿ ಇರೋವರೆಗೂ ಟೂರ್ನಿ ನಡೆಯುವುದು ಅನುಮಾನ. ಮೋದಿಯವರ ಅಜೆಂಡಾ ಏನೆಂದು ಭಾರತೀಯರಿಗೂ ಅರವಿದೆ. ಋಣಾತ್ಮಕ ಆಲೋಚನೆಗಳನ್ನೇ ತುಂಬಿಕೊಂಡಿರುವ ಮೋದಿ ಉಭಯ ದೇಶದ ನಡುವಿನ ಸ್ನೇಹ ವಾತಾವರಣಕ್ಕೆ ಕಗ್ಗಂಟಾಗಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com