ಇದೇ ಮೊದಲ ಬಾರಿಗೆ ರಣಜಿ ಟೂರ್ನಿಯ ಸೆಮಿಫೈನಲ್ಸ್ ಮತ್ತು ಫೈನಲ್ ನಲ್ಲಿ ಡಿಆರ್ ಎಸ್

ದೇಶಿಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಸೆಮಿಫೈನಲ್ಸ್  ಮತ್ತು ಅಂತಿಮ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸುವ (ಡಿಆರ್ಎಸ್) ಅವಕಾಶವನ್ನು ಮೊದಲ ಬಾರಿಗೆ ಬಳಸಲಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶಿಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಸೆಮಿಫೈನಲ್ಸ್ ಮತ್ತು ಅಂತಿಮ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸುವ(ಡಿಆರ್ಎಸ್) ಅವಕಾಶವನ್ನು ಮೊದಲ ಬಾರಿಗೆ ಬಳಸಲಾಗುತ್ತದೆ.
  
ರಣಜಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಟಗಾರರು ಡಿಆರ್ಎಸ್ ಅನ್ನು ಸೆಮಿಫೈನಲ್ಸ್ ಮತ್ತು ಅಂತಿಮ ಪಂದ್ಯಗಳಲ್ಲಿ ಬಳಸಲು  ಬಿಸಿಸಿಐ ಅವಕಾಶ ನೀಡಿದೆ. ರಣಜಿ ಟ್ರೋಫಿಯ ಸೆಮಿಫೈನಲ್ಸ್ ಪಂದ್ಯಗಳು ಫೆಬ್ರವರಿ 29 ರಿಂದ ನಡೆಯಲಿವೆ. ಸೌರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ-ಬಂಗಾಳ ನಡುವೆ ಸೆಮಿಫೈಲ್ಸ್ ಪಂದ್ಯಗಳು ನಡೆಯಲಿವೆ. ಮಾರ್ಚ್ 9 ರಿಂದ ಫೈನಲ್ ಪಂದ್ಯ ನಡೆಯಲಿದೆ.
  
ಟೆಸ್ಟ್ ಕ್ರಿಕೆಟ್‌ನಲ್ಲಿ, ಪ್ರತಿ ತಂಡಕ್ಕೆ ಸಾಮಾನ್ಯವಾಗಿ ಎರಡು ಡಿಆರ್‌ಎಸ್ಗಳು ಲಭ್ಯವಿರುತ್ತವೆ. ಮೇಲ್ಮನವಿಯನ್ನು ತಂಡ ಯಶಸ್ವಿಯಾಗಿ ಬಳಿಸಿಕೊಂಡಲ್ಲಿ ತಂಡಕ್ಕೆ ಲಾಭವಾಗುತ್ತದೆ. ಈ ಎರಡು ಡಿಆರ್ ಎಸ್ ಗಳನ್ನು ತಂಡ ಕಳೆದುಕೊಂಡಲ್ಲಿ ಮತ್ತೆ ಈ ಅವಕಾಶ ಬಳಸಲು ಸಾಧ್ಯವಿಲ್ಲ. ಆದರೆ ರಣಜಿ ಟ್ರೋಫಿಯಲ್ಲಿ ಪ್ರತಿ ಇನ್ನಿಂಗ್ಸ್‌ನಲ್ಲಿ ತಂಡವು ಗರಿಷ್ಠ ನಾಲ್ಕು ಬಾರಿ ಡಿಆರ್ ಎಸ್ ಬಳಸ ಬಹುದು.
  
ರಣಜಿ ಟ್ರೋಫಿಯಲ್ಲಿ ಡಿಆರ್‌ಎಸ್ ಬಳಕೆ ಸೀಮಿತವಾಗಿರುತ್ತದೆ ಮತ್ತು ಸ್ನಿಕೋ, ಹಾಟ್ ಸ್ಪಾಟ್ ಮತ್ತು ಬಾಲ್ ಟ್ರ್ಯಾಕರ್ ಅನ್ನು ಬಳಸಲಾಗುವುದಿಲ್ಲ. ಮೂರನೇ ಅಂಪೈರ್‌ಗೆ ಸಹಾಯ ಮಾಡಲು ನಿಧಾನ ಚಲನೆಯ ಕ್ಯಾಮೆರಾ ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com