ಶಫಾಲಿ ವರ್ಮಾ ಮಿಂಚಿನಾಟಕ್ಕೆ ಶಿಖಾ ಪಾಂಡೆ ಶ್ಲಾಘನೆ: ನಿರ್ಭೀತಿಯಿಂದ ಆಡುವಂತೆ ತಂಡಕ್ಕೆ ಲೈಸನ್ಸ್

ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16ರ ಪ್ರಾಯದ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಭಾರತ ತಂಡದ ಹಿರಿಯ ವೇಗಿ ಶಿಖಾ ಪಾಂಡೆ ಅವರು ಶಫಾಲಿ ವರ್ಮಾ ಅವರ ಭಯರಹಿತ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.
ಶಿಖಾ ಪಾಂಡೆ
ಶಿಖಾ ಪಾಂಡೆ

ಪರ್ತ್: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16ರ ಪ್ರಾಯದ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಭಾರತ ತಂಡದ ಹಿರಿಯ ವೇಗಿ ಶಿಖಾ ಪಾಂಡೆ ಅವರು ಶಫಾಲಿ ವರ್ಮಾ ಅವರ ಭಯರಹಿತ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.

ಸೋಮವಾರ ಬಾಂಗ್ಲಾದೇಶ ವಿರುದ್ಧ ಟೂರ್ನಿಯ ಸತತ ಎರಡನೇ ಪಂದ್ಯದಲ್ಲೂ ಭಾರತ ಗೆಲುವಿನ ನಗೆ ಬೀರಿತು. ಈ ಪಂದ್ಯದಲ್ಲಿ ಶಫಾಲಿ ವರ್ಮಾ ಅವರು ಕೇವಲ 17 ಎಸೆತಗಳಿಗೆ 39 ರನ್ ಚಿಚ್ಚಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಶಿಖಾ ಪಾಂಡೆ,” ಶಫಾಲಿ ವರ್ಮಾ ಅವರನ್ನು ಬದಲಾವಣೆಯಾಗುವಂತೆ ನಾವು ಏನೂ ಹೇಳಿಲ್ಲ. ಭಯ ರಹಿತ ಹಾಗೂ ತನಗೆ ಇಷ್ಟ ಬಂದಂತೆ ಬ್ಯಾಟಿಂಗ್ ಮಾಡುವಂತೆ ನಾವು ಲೈಸನ್ಸ್ ನೀಡಿದ್ದೇವೆ. ಆಕೆ ಅದ್ಭುತ ಬ್ಯಾಟ್ಸ್ ವುಮೆನ್. 16ರ ವಯಸ್ಸಿನಲ್ಲಿ ನಾವು ಕ್ರಿಕೆಟ್ ತರಬೇತಿಯನ್ನೇ ಆರಂಭಿಸಿರಲಿಲ್ಲ. ನಮ್ಮ ತಂಡದಲ್ಲಿ ಅಂಥ ಯುವ ಆಟಗಾರ್ತಿ ಇರುವುದು ಸಂತಸವಾಗುತ್ತಿದೆ,” ಎಂದು ಕೊಂಡಾಡಿದರು.

ಸೋಮವಾರ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ ಗಳಿಗೆ ಆರು ವಿಕೆಟ್ ನಷ್ಟಕ್ಕೆ 142 ರನ್ ದಾಖಳಿಸಿತ್ತು. ಬಳಿಕ, ಬಾಂಗ್ಲಾದೇಶ ತಂಡವನ್ನು ಭಾರತ ಬೌಲಿಂಗ್ ವಿಭಾಗ ನಿಯಂತ್ರಿಸಿತ್ತು.

“ತಂಡವಾಗಿ  ನಮ್ಮ ಬಳಿ ವಿಶೇಷವಾಗಿ ಏನೂ ಇಲ್ಲ. ನಮ್ಮದೊಂದು ಅತ್ಯುತ್ತಮ ತಂಡವಾಗಿದೆ. ನಾವು ಗಳಿಸಿದ್ದ ರನ್ ನಮ್ಮ ಪಾಲಿಗೆ ಅದ್ಭುತ ಮೊತ್ತವಾಗಿತ್ತು. ಏಕೆಂದರೆ, ನಮ್ಮ ಬೌಲಿಂಗ್ ವಿಭಾಗದ ಮೇಲೆ ನಮಗೆ ನಂಬಿಕೆ ಇದೆ.  ಅದರಂತೆ, ಎದುರಾಳಿ ತಂಡವನ್ನು ನಿಯಂತ್ರಿಸಿದೆವು,” ಎಂದು ಹೇಳಿದರು.

ಆಸ್ಟ್ರೇಲಿಯಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಸ್ಪಿನ್ನರ್ ಪೂನಮ್ ಯಾದವ್ ಅವರು ಎರಡನೇ ಪಂದ್ಯದಲ್ಲೂ ಮೂರು ವಿಕೆಟ್ ಕಿತ್ತಿದ್ದರು. ಭಾರತ ತನ್ನ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 27 ರಂದು ಸೆಣಸಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com