ಮಹಿಳೆಯರ ಟಿ20 ವಿಶ್ವಕಪ್ ನಲ್ಲಿ ದಾಖಲೆ ಬರೆದ ಭಾರತದ ಶಫಾಲಿ ವರ್ಮಾ!

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ ನಲ್ಲಿ ಭಾರತದ ಸ್ಫೋಟಕ ಆಟಗಾರ್ತಿ ಕೇವಲ 16 ವರ್ಷದ ಶಫಾಲಿ ವರ್ಮಾ ದಾಖಲೆ ನಿರ್ಮಾಣ ಮಾಡಿದ್ದಾರೆ.
ಭಾರತದ ಶಫಾಲಿ ಶರ್ಮಾ
ಭಾರತದ ಶಫಾಲಿ ಶರ್ಮಾ

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ ನಲ್ಲಿ ಭಾರತದ ಸ್ಫೋಟಕ ಆಟಗಾರ್ತಿ ಕೇವಲ 16 ವರ್ಷದ ಶಫಾಲಿ ವರ್ಮಾ ದಾಖಲೆ ನಿರ್ಮಾಣ ಮಾಡಿದ್ದಾರೆ.

ಮಹಿಳೆಯ ಟಿ20 ವಿಶ್ವಕಪ್ ನಲ್ಲಿ ಸ್ಟ್ರೈಕ್ ರೇಟ್ ಹೊಂದಿದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಶಫಾಲಿ ವರ್ಮಾ ಭಾಜನರಾಗಿದ್ದಾರೆ. ವೃತ್ತಿ ಜೀವನದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಫಾಲಿ ವರ್ಮಾ 147.97ರ ಸರಾಸರಿಯಲ್ಲಿ ಒಟ್ಟು 438 ರನ್ ಗಳಿಸಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಪಟ್ಟಿಯಲ್ಲಿ ಅಗ್ರಸ್ಛಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ್ತಿ ದಕ್ಷಿಣ ಆಫ್ರಿಕಾದ ಕ್ಲೋಯ್ ಟ್ರಯಾನ್ (722 ರನ್, 138.31 ಸರಾಸರಿ) ಮತ್ತು ಆಸ್ಟ್ರೇಲಿಯಾದ ಅಲಿಸಾ ಹೀಲಿ (1.875 ರನ್, 129.66 ಸರಾಸರಿ) ಅವರನ್ನು ಶಫಾಲಿ ವರ್ಮಾ ಹಿಂದಿಕ್ಕಿದ್ದಾರೆ.

ಕೇವಲ 16 ವರ್ಷದ ಶಫಾಲಿ ವರ್ಮಾ ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 114 ರನ್ ಗಳಿಸಿದ್ದು, ಒಟ್ಟಾರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ 438 ರನ್ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com