2ನೇ ಟೆಸ್ಟ್: ದಾಖಲೆ ಸನಿಹದಲ್ಲಿ ಮಯಾಂಕ್ ಅಗರ್ವಾಲ್

ಭಾರತದ ಉದಯೋನ್ಮಖ ಆಟಗಾರ ಮಯಾಂಕ್ ಅಗರ್ವಾಲ್ ದಾಖಲೆಯ ಸನಿಹದಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಈ ದಾಖಲೆ ಬರೆಯುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕ್ರೈಸ್ಟ್ ಚರ್ಚ್: ಭಾರತದ ಉದಯೋನ್ಮಖ ಆಟಗಾರ ಮಯಾಂಕ್ ಅಗರ್ವಾಲ್ ದಾಖಲೆಯ ಸನಿಹದಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮಯಾಂಕ್ ಈ ದಾಖಲೆ ಬರೆಯುವ ಸಾಧ್ಯತೆ ಇದೆ.

ಮಯಾಂಕ್ ಅಗರ್ವಾಲ್ 10 ಟೆಸ್ಟ್ ಪಂದ್ಯಗಳನ್ನಾಡಿದ್ದು, 10 ಪಂದ್ಯಗಳಿಂದ 15 ಇನ್ನಿಂಗ್ಸ್ ಗಳಲ್ಲಿ 964 ರನ್ ಗಳಿಸಿದ್ದಾರೆ. ಮಯಾಂಕ್ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 36 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಸಾವಿರ ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ. 

ಅಲ್ಲದೆ ಈ ಸಾವಿರ ರನ್ ಗಳೊಂದಿಗೆ ಮಯಾಂಕ್ ಮಹತ್ವದ ದಾಖಲೆ ಬರೆಯಲಿದ್ದು, ಅತ್ಯಂತ ಕಡಿಮೆ ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ. ಅಲ್ಲದೆ ಕಡಿಮಿ ಇನ್ನಿಂಗ್ಸ್ ನಲ್ಲಿ ಸಾವಿರ ರನ್ ಗಳಿಸಿದ ಎರಡನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ. ಇದಕ್ಕೂ ಮೊದಲು ಭಾರತ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೇವಲ 14 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಬರೆದಿದ್ದರು. 

ಈ ಅಪರೂಪದ ದಾಖಲೆಗೆ ಮಯಾಂಕ್ ಗೆ ಕೇವಲ 36 ರನ್ ಗಳ ಅವಶ್ಯಕತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com