ಟಿ20 ವಿಶ್ವಕಪ್: ಟೀಂ ಇಂಡಿಯಾ ದಾಖಲೆ ಮುರಿದ ಆಫ್ರಿಕಾ ವನಿತೆಯರು

ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು  ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.

Published: 28th February 2020 02:54 PM  |   Last Updated: 28th February 2020 02:54 PM   |  A+A-


South Africa

ದಕ್ಷಿಣ ಆಫ್ರಿಕಾ

Posted By : Vishwanath S
Source : UNI

ಕ್ಯಾನ್‌ಬೆರಾ: ಇಲ್ಲಿನ ಮನುಕಾ ಓವಲ್ ಅಂಗಳದಲ್ಲಿ ಲಿಜೆಲ್ಲಿ ಲೀ(101 ರನ್) ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 195 ರನ್ ದಾಖಲೆಯ ಮೊತ್ತ ಗಳಿಸಿದೆ. ಚುಟುಕು  ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತ ಇದಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 195 ರನ್ ದಾಖಲಿಸಿತು. ಆ ಮೂಲಕ ಭಾರತದ ದಾಖಲೆಯನ್ನು ಆಫ್ರಿಕಾ ವನಿತೆಯರು ಮುರಿದರು. ಭಾರತ 2018ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 20 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 194 ರನ್ ಗಳಿಸಿತ್ತು.

ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮೂರನೇ ಓವರ್ ನಲ್ಲಿ ಡೇನ್ ವಾನ್ ನೀಕೆರ್ಕ್ (2) ಅವರನ್ನು ಕಳೆದುಕೊಂಡಿತು. ನಂತರ, ಜತೆಯಾದ ಲೀ ಹಾಗೂ ಸುನ್ ಲುಸ್ ಜೋಡಿ  131 ರನ್ ಜತೆಯಾಟವಾಡಿತು. ಲೀ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಸಿದರು. ನಂತರ, 15ನೇ ಓವರ್ ನಲ್ಲಿ ಲೀ ಅವರ ವಿಕೆಟ್ ಅನ್ನು ಥಾಯ್ಲೆಂಡ್ ಪಡೆಯಿತು. ಅಂತಿಮವಾಗಿ ಆಫ್ರಿಕಾ ತಂಡ ಥಾಯ್ಲೆಂಡ್ ಗೆ 196 ರ್ ಕಠಿಣ ಗುರಿ ನೀಡಿದೆ. ಲೀ ಬಿಟ್ಟರೆ ಅದ್ಭುತ ಬ್ಯಾಟಿಂಗ್ ಮಾಡಿದ ಲುಸ್ ಅಜೇಯ 61 ರನ್ ಗಳಿಸಿದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp