ಯುವ ಎಡಗೈ ಬ್ಯಾಟ್ಸ್‌‌ಮನ್ ಮಂಜೋತ್ ಕಲ್ರಾ ಒಂದು ವರ್ಷ ಅಮಾನತು!

16 ಹಾಗೂ 19 ವಯೋಮಿತಿ ಅವಧಿಯಲ್ಲಿ ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದ ದೆಹಲಿಯ ಯುವ ಎಡಗೈ ಬ್ಯಾಟ್ಸ್‌‌ಮನ್ ಮಂಜೋತ್ ಕಲ್ರಾ ಅವರನ್ನು ಒಂದು ವರ್ಷ ಡಿಡಿಸಿಎ ಒಂಬುಡ್ಸ್‌‌ಮನ್ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಇವರು ಕಳೆದ ಆವೃತ್ತಿಯ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದರು.
ಮಂಜೋತ್ ಕಲ್ರಾ
ಮಂಜೋತ್ ಕಲ್ರಾ

ನವದೆಹಲಿ: 16 ಹಾಗೂ 19 ವಯೋಮಿತಿ ಅವಧಿಯಲ್ಲಿ ಸುಳ್ಳು ಜನನ ಪ್ರಮಾಣ ಪತ್ರ ಸಲ್ಲಿಸಿದ್ದ ದೆಹಲಿಯ ಯುವ ಎಡಗೈ ಬ್ಯಾಟ್ಸ್‌‌ಮನ್ ಮಂಜೋತ್ ಕಲ್ರಾ ಅವರನ್ನು ಒಂದು ವರ್ಷ ಡಿಡಿಸಿಎ ಒಂಬುಡ್ಸ್‌‌ಮನ್ ಅಮಾನತು ಶಿಕ್ಷೆ ವಿಧಿಸಿದ್ದಾರೆ. ಇವರು ಕಳೆದ ಆವೃತ್ತಿಯ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಶತಕ ಬಾರಿಸಿದ್ದರು.

ಇದೇ ರೀತಿ ದೆಹಲಿಯ ಹಿರಿಯದ ತಂಡದ ಉಪ ನಾಯಕ ನಿತೀಶ್ ರಾಣಾ ಅವರು ಕೂಡ ಕಿರಿಯರ ಹಂತದಲ್ಲಿ ಜನನ ಸಂಬಂದ ಸುಳ್ಳು ಪ್ರಮಾಣ ಪತ್ರ ನೀಡಿ ಸಿಕ್ಕಿ ಹಾಕಿಕೊಂಡಿದ್ದರು.

ಮಂಜೋತ್ ಕಲ್ರಾ ಅವರು ವಯಸ್ಸು ಬಿಸಿಸಿಐನಲ್ಲಿ 20 ವರ್ಷ 351 ದಿನಗಳು ತೋರಿಸುತ್ತಿದೆ. ಇವರು ದೆಹಲಿ 23 ವಯೋಮಿತಿ ತಂಡದ ಪರ ಬಂಗಾಳ ವಿರುದ್ಧ 80 ರನ್ ಗಳಿಸಿದ್ದರು. ಅಲ್ಲದೇ, ರಣಜಿ ಟ್ರೋಫಿಯಲ್ಲಿ ಶಿಖರ್ ಧವನ್ ಜತೆ ಆರಂಭಿಕನಾಗಿ ಆಡಿದ್ದರು. ಆದರೆ, ಇದೀಗ ಒಂದು ವರ್ಷ ಅಮಾನತು ಶಿಕ್ಷಗೆ ಗುರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com