ಭಾರತ-ಶ್ರೀಲಂಕಾ ಟಿ-20: ಹೊಸ ವರ್ಷದ ಮೊದಲ ಪಂದ್ಯ ಮಳೆಯಿಂದ ರದ್ದು

ಹೊಸ ವರ್ಷದ ಮೊದಲ ಸರಣಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ 20 ಪಂದ್ಯವು ಭಾನುವಾರ ಮಳೆಯಿಂದಾಗಿ, ಒಂದು ಬೌಲ್ ಮಾಡದೆ ರದ್ದುಪಡಿಸಲಾಗಿದೆ ಎಂದು ಘೋಷಿಸಲಾಯಿತು.
ಒದ್ದೆಯಾದ ಪಿಚ್
ಒದ್ದೆಯಾದ ಪಿಚ್

ಗುವಾಹಟಿ: ಹೊಸ ವರ್ಷದ ಮೊದಲ ಸರಣಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ 20 ಪಂದ್ಯವು ಭಾನುವಾರ ಮಳೆಯಿಂದಾಗಿ, ಒಂದು ಬೌಲ್ ಮಾಡದೆ ರದ್ದುಪಡಿಸಲಾಗಿದೆ ಎಂದು ಘೋಷಿಸಲಾಯಿತು. ಇದರಿಂದ ಬಹು ಸಮಯದಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ನಿರಾಸೆ ಆಯಿತು.

ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಬೇಕಿದ್ದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ರದ್ದಾದ ನಂತರ, ಉಭಯ ತಂಡಗಳು ಈಗ ಇಂದೋರ್‌ಗೆ ತೆರಳಲಿದ್ದು, ಎರಡನೇ ಪಂದ್ಯ ಜನವರಿ 7 ರಂದು ನಡೆಯಲಿದೆ.

ಮೊದಲ ಪಂದ್ಯದ ಎಲ್ಲಾ 27 ಸಾವಿರ ಟಿಕೆಟ್‌ ಮಾರಾಟವಾಗಿದ್ದವು. ಮಳೆಯಿಂದಾಗಿ ನಿಗದಿತ ಸಮಯದಲ್ಲಿ ಆಟವನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದ ನಂತರ ಭಾರತದ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಟಾಸ್‌ ನಂತರ ಮಳೆರಾಯನ ಆಟ ಶುರುವಾಗಿ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಪಂದ್ಯ ವೀಕ್ಷಣೆಯ ಆಸೆಗೆ ತಣ್ಣೀರೆರಚಿತು.

ಭಾರತ ಮತ್ತು ಶ್ರೀಲಂಕಾ ನಡುವಣ ಪಂದ್ಯಕ್ಕೂ ಮುನ್ನ ವರುಣ ಅಬ್ಬರಿಸಿ ತಣ್ಣಗಾದರೂ, ಪಿಚ್ ಸಂಪೂರ್ಣ ಒದ್ದೆಯಾಗಿದ್ದರಿಂದ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com