ನಾಚಿಕೆಯಾಗಬೇಕು: ಪಿಚ್‌ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಸಿದ್ದಕ್ಕೆ ಬಿಸಿಸಿಐಗೆ ನೆಟಿಗರ ವ್ಯಂಗ್ಯ!

ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಬೇಗನೆ ಮಳೆ ನಿಂತರೂ ಪಂದ್ಯ ಶುರುವಾಗಲಿಲ್ಲ. ಹೊದಿಕೆ ಹಾಸಿದ್ದರೂ ಪಿಚ್ ನಲ್ಲಿ ನಿಂತಿದ್ದರಿಂದ ಸಿಬ್ಬಂದಿ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಗುವಾಹಟಿ: ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಬೇಗನೆ ಮಳೆ ನಿಂತರೂ ಪಂದ್ಯ ಶುರುವಾಗಲಿಲ್ಲ. ಹೊದಿಕೆ ಹಾಸಿದ್ದರೂ ಪಿಚ್ ನಲ್ಲಿ ನಿಂತಿದ್ದರಿಂದ ಸಿಬ್ಬಂದಿ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ. 

ಮಳೆಯಿಂದ ಒದ್ದೆಯಾಗಿದ್ದ ಪಿಚ್ ಒಣಗಿಸಲು ಸಿಬ್ಬಂದಿ ವಾಕ್ಯೂಮ್ ಕ್ಲೀನರ್ ಮತ್ತು ಹೇರ್ ಡ್ರೈಯರ್ ಬಳಿಸಿದ್ದರು. ಇದಕ್ಕೆ ಗರಂ ಆಗಿರುವ ನೆಟಿಗರು, ವಿಶ್ವದ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಹೇರ್ ಡ್ರೈಯರ್ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂತಾರಾಷ್ಟ್ರೀಯ ಪಂದ್ಯವನ್ನು ಸಣ್ಣ ಕಾರಣಕ್ಕೆ ರದ್ದು ಮಾಡಲಾಗಿದೆ. ತಂತ್ರಜ್ಞಾನದ ಸಹಾಯ ಪಡೆದು ಪಿಚ್ ಒಣಗಿಸಬಹುದಿತ್ತು. ಆದರೆ ಪಂದ್ಯ ರದ್ದು ಮಾಡಿದ್ದು ಎಷ್ಟು ಸರಿ? ವಾಟ್ ಎ ಶೇಮ್ ಎಂದು ಟ್ವೀಟಿಸಿದ್ದಾರೆ. 

ಇನ್ನು ಕೆಲವರು ನಾನು ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆಯನ್ನು ಕಳುಹಿಸಬೇಕು ಎಂದು ಯೋಚಿಸಿದ್ದೇನೆ. ಇವುಗಳನ್ನು ಕಳುಹಿಸಲು ಯಾರನ್ನು ಸಂಪರ್ಕಿಸಬೇಕೆಂದು ಜನರು ಟ್ರೋಲ್ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com