ಮೇ 24ರಂದು ಐಪಿಎಲ್ 2020 ಫೈನಲ್: ಪಂದ್ಯ ನಡೆಯೋದು ಎಲ್ಲಿ ಗೊತ್ತ?
ವಿಶ್ವದ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಮಾರ್ಚ್ 29ರಿಂದ ಆರಂಭಗೊಳ್ಳಲಿದ್ದು ಫೈನಲ್ ಪಂದ್ಯ ಯಾವಾಗ? ಎಲ್ಲಿ? ನಡೆಯಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
Published: 07th January 2020 06:16 PM | Last Updated: 07th January 2020 06:16 PM | A+A A-

ಆರ್ ಸಿಬಿ ತಂಡ
ನವದೆಹಲಿ: ವಿಶ್ವದ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಮಾರ್ಚ್ 29ರಿಂದ ಆರಂಭಗೊಳ್ಳಲಿದ್ದು ಫೈನಲ್ ಪಂದ್ಯ ಯಾವಾಗ? ಎಲ್ಲಿ? ನಡೆಯಲಿದೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಮಾರ್ಚ್ 29ರಂದು ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಟೂರ್ನಿ ಉದ್ಘಾಟನೆಗೊಳ್ಳಲಿದ್ದು ಮೇ 24ರಂದು ಫೈನಲ್ ಪಂದ್ಯ ಸಹ ಅದೇ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 7.30ರ ಸುಮಾರಿಗೆ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಇದೆ. ಇನ್ನು ಟೂರ್ನಿ ಬರೋಬ್ಬರಿ 57 ದಿನಗಳ ಕಾಲ ನಡೆಯಲಿದೆ.
ಈ ಬಾರಿ ಸಹ ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಇನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಸಖತ್ ಕರಸತ್ತು ನಡೆಸಲಿದೆ.
ಆದಾಯ ಹೆಚ್ಚಿಸುವ ಸಲುವಾಗಿ ಫೈನಲ್ ಪಂದ್ಯ 4 ಗಂಟೆ ಬದಲಿಗೆ 7.30ಕ್ಕೆ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.