ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆ ಭಾರತದ ತಂಡ ಪ್ರಕಟ

ಫೆಬ್ರವರಿ 21 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗಾಗಿ 15 ಸದಸ್ಯರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪ್ರಕಟಿಸಲಾಗಿದೆ. ಬಂಗಾಳಿ ಆಟಗಾರ್ತಿ  ರಿಚಾ ಘೋಷ್ ತಂಡಕ್ಕೆ ಸೇರ್ಪಡೆಗೊಂಡ ಏಕೈಕ ಹೊಸ ಪ್ರತಿಭೆ ಎನಿಸಿದ್ದಾರೆ.
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್

ಫೆಬ್ರವರಿ 21 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗಾಗಿ 15 ಸದಸ್ಯರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪ್ರಕಟಿಸಲಾಗಿದೆ. ಬಂಗಾಳಿ ಆಟಗಾರ್ತಿ  ರಿಚಾ ಘೋಷ್ ತಂಡಕ್ಕೆ ಸೇರ್ಪಡೆಗೊಂಡ ಏಕೈಕ ಹೊಸ ಪ್ರತಿಭೆ ಎನಿಸಿದ್ದಾರೆ.

15 ವರ್ಷದ ಹರಿಯಾಣ ಶಾಲಾ ವಿದ್ಯಾರ್ಥಿನಿ ಶಫಾಲಿ ವರ್ಮಾಮೊದಲ ಋತುವಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲವು ಉತ್ತಮ ಪ್ರದರ್ಶನ ನೀಡಿದ ನಂತರ ತನ್ನ ಮೊದಲ ಜಾಗತಿಕ  ಪಂದ್ಯಾವಳಿಯನ್ನು ಆಡಲಿದ್ದಾರೆ.

ಇತ್ತೀಚಿನ ಮಹಿಳಾ ಚಾಲೆಂಜರ್ ಟ್ರೋಫಿಯಲ್ಲಿ ನೀಡಿದ್ದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಪಂದ್ಯಾವಳಿಗೆ ರಿಚಾ ಆಯ್ಕೆಯಾಗಿದ್ದಾರೆ.ರಿಚಾ ಒಂದೇ ಪಂದ್ಯದಲ್ಲಿ  ಪಂದ್ಯದಲ್ಲಿ 26 ಎಸೆತಗಳಲ್ಲಿ 36 ರನ್ (ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್) ಬಾರಿಸಿ ಗಮನ ಸೆಳೆದಿದ್ದರು.

ಟಿ 20 ವಿಶ್ವಕಪ್‌ಗೆ ಮುಂಚಿತವಾಗಿ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಸರಣಿಗಾಗಿ 16 ಸದಸ್ಯರ ತಂಡವನ್ನು ಆಯ್ಕೆದಾರರು ಘೋಷಿಸಿದ್ದು, ನುಝತ್ ಪರ್ವೀನ್  ಅವರನ್ನು 16 ನೇ ಆಟಗಾರರನ್ನಾಗಿ ಸೇರ್ಪಡೆ ಮಾಡಲಾಗಿದೆ. ಆ ಪಂದ್ಯಾವಳಿ ಜನವರಿ 31 ರಂದು ಪ್ರಾರಂಭಗೊಳ್ಳುತ್ತಿದ್ದು ಇಂಗ್ಲೆಂಡ್ ಸಹ ಸ್ಪರ್ಧಿಸಲಿದೆ.

ಇನ್ನು ವುಶ್ವ ಟಿ20  ತಂಡ ಹೀಗಿದೆ-

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್‌, ಅರುಂಧತಿ ರೆಡ್ಡಿ.

ತ್ರಿಕೋನ ಸರಣಿಗೆ ಆಯ್ಕೆಯಾಗಿರುವ ತಂಡ ಹೀಗಿದೆ-

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಕಾರ್, ಅರುಂಧತಿ ರೆಡ್ಡಿ, ನುಝಾಹತ್‌ ಪರ್ವೀನ್.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com