ಎಂಎಸ್ ಧೋನಿಯ ಋಣ ಸಂದಾಯ ಅವಕಾಶ ತಪ್ಪಿಸಿಕೊಂಡ ಬಿಸಿಸಿಐ ಬಾಸ್ ಗಂಗೂಲಿ!

ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂದು, ಸೌರವ್ ಗಂಗೂಲಿ ಅವರಿಗೆ ತಮ್ಮ ಕೊನೆಯ ಟೆಸ್ಟ್ ನ ಕೊನೆಯ ದಿನ ನಾಯಕತ್ವ ನೀಡಿ ಗೌರವಯುತ ವಿದಾಯ ತಿಳಿಸಿದ್ದರು. 

Published: 16th January 2020 08:24 PM  |   Last Updated: 16th January 2020 08:24 PM   |  A+A-


Sourav Ganguly-MS Dhoni

ಸೌರವ್ ಗಂಗೂಲಿ-ಎಂಎಸ್ ಧೋನಿ

Posted By : Vishwanath S
Source : UNI

ನವದೆಹಲಿ: ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂದು, ಸೌರವ್ ಗಂಗೂಲಿ ಅವರಿಗೆ ತಮ್ಮ ಕೊನೆಯ ಟೆಸ್ಟ್ ನ ಕೊನೆಯ ದಿನ ನಾಯಕತ್ವ ನೀಡಿ ಗೌರವಯುತ ವಿದಾಯ ತಿಳಿಸಿದ್ದರು. 

ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮಾಹಿ ಮಾಡಿದ ಸಹಾಯದ ಋಣ ತೀರಿಸುವ ಅವಕಾಶವನ್ನು ಕಳೆದುಕೊಂಡರು.

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2019-2020ರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಧೋನಿ ಯಾವುದೇ ವಿಭಾಗದಲ್ಲಿ ಸ್ಥಾನ ಪಡೆದಿಲ್ಲ. 2019 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಧೋನಿ ಸಂಪೂರ್ಣವಾಗಿ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದಾರೆ ಮತ್ತು ನಿವೃತ್ತಿಯ ಬಗ್ಗೆ ಮೌನ ತಾಳಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp