ಭಾರತ-ಆಸ್ಟ್ರೇಲಿಯ: 3 ನೇ ಕ್ರಮಾಂಕಕ್ಕೆ ವಾಪಸ್ಸಾದ ವಿರಾಟ್ ಕೊಹ್ಲಿ

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗದೇ ವಿರಾಟ್ ಕೊಹ್ಲಿಯನ್ನು 3 ನೇ ಕ್ರಮಾಂಕದಲ್ಲೇ ಕ್ರೀಸ್ ಗೆ ಇಳಿಸಲು ನಿರ್ಧರಿಸಲಾಗಿದೆ. 
ಭಾರತ-ಆಸ್ಟ್ರೇಲಿಯ: 3 ನೇ ಕ್ರಮಾಂಕಕ್ಕೆ ವಾಪಸ್ಸಾದ ವಿರಾಟ್ ಕೊಹ್ಲಿ
ಭಾರತ-ಆಸ್ಟ್ರೇಲಿಯ: 3 ನೇ ಕ್ರಮಾಂಕಕ್ಕೆ ವಾಪಸ್ಸಾದ ವಿರಾಟ್ ಕೊಹ್ಲಿ

ರಾಜ್ಕೋಟ್: ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗದೇ ವಿರಾಟ್ ಕೊಹ್ಲಿಯನ್ನು 3 ನೇ ಕ್ರಮಾಂಕದಲ್ಲೇ ಕ್ರೀಸ್ ಗೆ ಇಳಿಸಲು ನಿರ್ಧರಿಸಲಾಗಿದೆ. 

ಈ ಹಿಂದಿನ ಪ್ರಯೋಗಗಳಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಆಟಗಾರರಿಬ್ಬರೂ ಪೆವಿಲಿಯನ್ ಗೆ ನಡೆದ ಬಳಿಕ ಕ್ರೀಸ್ ಗೆ ಇಳಿಯುತ್ತಿದ್ದರು. ಈಗ ಅದೇ ಕ್ರಮಾಂಕಕ್ಕೆ ವಾಪಸ್ಸಾಗಲಿದ್ದಾರೆ. 

ಫಾರ್ಮ್ ನಲ್ಲಿರುವ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್ ಅವರನ್ನು ಕ್ರೀಸ್ ಗೆ ಇಳಿಸುವ ಉದ್ದೇಶದಿಂದ ಕೊಹ್ಲಿ ಕೆಳ ಕ್ರಮಾಂಕದಲ್ಲಿ ಆಡುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು.  ಆದರೆ ಈ ಸೂತ್ರ ವಿಫಲವಾಗಿ ಕೊಹ್ಲಿಯ ಪ್ರಯತ್ನಗಳು ತಂಡಕ್ಕೆ ಪ್ರಯೋಜಕಾರಿಯಾಗಿ ಪರಿಣಮಿಸುವುದು ಅಸಾಧ್ಯವಾಗಿತ್ತು. ಕೊಹ್ಲಿ 3 ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿಯುತ್ತಿದ್ದರಿಂದ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬುವಂತಿರುತ್ತದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ತಮ್ಮ ಎಂದಿನ ಕ್ರಮಾಂಕಕ್ಕೆ ವಾಪಸ್ಸಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com