ಎರಡನೇ ಏಕದಿನ: ಟಾಸ್ ಗೆದ್ದ ಅಸೀಸ್ ಬೌಲಿಂಗ್ ಆಯ್ಕೆ, ಪಂತ್ ಬದಲಿಗೆ ಮನೀಶ್ ಪಾಂಡೆ ಕಣಕ್ಕೆ

ಮೊದಲ ಪಂದ್ಯದಂತೆ ಇಂದಿನ ಎರಡನೇ ಹಣಾಹಣಿಯಲ್ಲೂ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಆದ್ದರಿಂದ ಕೊಹ್ಲಿ ನಾಯಕತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಎರಡನೇ ಏಕದಿನ: ಟಾಸ್ ಗೆದ್ದ ಸೀಸ್ ಬೌಲಿಂಗ್ ಆಯ್ಕೆ, ಪಂತ್ ಬದಲಿಗೆ ಮನೀಶ್ ಪಾಂಡೆ ಕಣಕ್ಕೆ
ಎರಡನೇ ಏಕದಿನ: ಟಾಸ್ ಗೆದ್ದ ಸೀಸ್ ಬೌಲಿಂಗ್ ಆಯ್ಕೆ, ಪಂತ್ ಬದಲಿಗೆ ಮನೀಶ್ ಪಾಂಡೆ ಕಣಕ್ಕೆ

ರಾಜ್ ಕೋಟ್: ಮೊದಲ ಪಂದ್ಯದಂತೆ ಇಂದಿನ ಎರಡನೇ ಹಣಾಹಣಿಯಲ್ಲೂ ಆಸ್ಟ್ರೇಲಿಯಾ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಆದ್ದರಿಂದ ಕೊಹ್ಲಿ ನಾಯಕತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ರಿಷಭ್ ಪಂತ್ ಅವರ ಬದಲು ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕರ್ನಾಟಕದ ಮನೀಷ್ ಪಾಂಡೆ, ಪಂತ್ ಸ್ಥಾನಕ್ಕೆ ಅಂತಿಮ 11ರಲ್ಲಿ ಸ್ಥಾನ ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. ಇನ್ನು, ಎದುರಾಳಿ ಆಸ್ಟ್ರೇಲಿಯಾ ತಂಡದ ಅಂತಿಮ 11ರಲ್ಲಿ ಯಾವುದೇ ಬದಲಾವಣೆ ಇಲ್ಲ

ಮೂರು ಪಂದ್ಯಗಳ ಸರಣಿಯ ಆರಂಭಿಕ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್‌ಗಳಿಂದ ಗೆದ್ದುಕೊಂಡಿದ್ದು ಇಂದು ಎರಡನೇ ಪಂದ್ಯ ನಡೆಯುತ್ತಿದೆ.

ತಂಡಗಳ ವಿವರ
ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಕೆಎಲ್‌ ರಾಹುಲ್ (ವಿಕೆಟ್‌ಕೀಪರ್‌), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರೊನ್ ಫಿಂಚ್ (ನಾಯಕ), ಮಾರ್ನಸ್ ಲ್ಯಾಬುಶೇನ್‌, ಸ್ಟೀವ್‌ ಸ್ಮಿತ್, ಆಷ್ಟನ್ ಟರ್ನರ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್‌), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಆಡಮ್ ಝಾಂಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com