ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ: ಬಿ ಗ್ರೇಡ್ ಗಿಳಿದ ಮಿಥಾಲಿ ರಾಜ್ 

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಂಡದ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಇಳಿದಿದ್ದಾರೆ. ರಾಧಾ ಯಾದವ್ ಮತ್ತು ತನಿಯಾ ಭಾಟಿಯಾ ಅವರನ್ನು ಬಿ ಗ್ರೇಡ್ ಗೆ ಹೆಚ್ಚಿಸಲಾಗಿದೆ.
ಮಿಥಾಲಿ ರಾಜ್
ಮಿಥಾಲಿ ರಾಜ್

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಂಡದ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಇಳಿದಿದ್ದಾರೆ. ರಾಧಾ ಯಾದವ್ ಮತ್ತು ತನಿಯಾ ಭಾಟಿಯಾ ಅವರನ್ನು ಬಿ ಗ್ರೇಡ್ ಗೆ ಹೆಚ್ಚಿಸಲಾಗಿದೆ.


ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟಿ20 ಆಟನಿಂದ ನಿವೃತ್ತಿ ಪಡೆದಿರುವ 37 ವರ್ಷದ ಮಿಥಾಲಿ ರಾಜ್ ಅವರನ್ನು 50 ಲಕ್ಷ ವಿಭಾಗದಲ್ಲಿ ಇರಿಸಲಾಗಿಲ್ಲ.ಆದರೂ ಮಿಥಾಲಿ ರಾಜ್ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಮುಂದುವರಿಯಲಿದ್ದು ಅವರನ್ನು 2021ರ ವಿಶ್ವಕಪ್ ವರೆಗೆ ಮುಂದುವರಿಸುವ ಯೋಜನೆಯಲ್ಲಿ ಬಿಸಿಸಿಐ ಇದೆ.


ಟಿ20 ಸ್ಕಿಪರ್ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧನ ಮತ್ತು ಪೂನಂ ಯಾದವ್ ಒಪ್ಪಂದ ಪಟ್ಟಿಯಲ್ಲಿ ಎ ವಿಭಾಗದಲ್ಲಿ ಇದೆ.ರಾಧಾ ಮತ್ತು ತನಿಯಾ ಕಳೆದ ವರ್ಷ ಒಪ್ಪಂದದಲ್ಲಿ 10 ಲಕ್ಷ ರೂಪಾಯಿಗಳ ಸಿ ಗ್ರೇಡ್ ನಲ್ಲಿದ್ದವರು ಈ ಬಾರಿ 30 ಲಕ್ಷ ರೂಪಾಯಿಗಳ ಬಿ ಗ್ರೇಡ್ ಗೆ ಏರಿಕೆಯಾಗಿದ್ದಾರೆ.


15 ವರ್ಷದ ಓಪನರ್ ಶಫಾಲಿ ವರ್ಮ ಮತ್ತು ಹರ್ಲೀನ್ ಡಿಯೊಲ್ ಇದೇ ಮೊದಲ ಬಾರಿಗೆ ಬಿಸಿಸಿಐ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 


ಇನ್ನು ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಿಂದ ಮೊನಾ ಮೆಶ್ರಮ್ ಅವರನ್ನು ಈ ವರ್ಷ ಕೈಬಿಡಲಾಗಿದೆ. ಈ ಒಪ್ಪಂದ ಕಳೆದ ಅಕ್ಟೋಬರ್ ನಿಂದ ಈ ವರ್ಷ ಸೆಪ್ಟೆಂಬರ್ ವರೆಗೆ ಅನ್ವಯವಾಗುತ್ತದೆ. 


ಗ್ರೇಡ್ ಎ(50ಲಕ್ಷ ರೂ) ಪಟ್ಟಿಯಲ್ಲಿರುವ ಆಟಗಾರ್ತಿಯರು: ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧನ, ಪೂನಂ ಯಾದವ್, 


ಗ್ರೇಡ್ ಬಿ(30 ಲಕ್ಷ ರೂ): ಮಿಥಾಲಿ ರಾಜ್, ಜ್ಹುಲನ್ ಗೋಸ್ವಾಮಿ, ಎಕ್ತಾ ಬಿಶ್ತ್, ರಾಧಾ ಯಾದವ್, ತನಿಯಾ ಭಾಟಿಯಾ, ಶಿಖಾ ಪಾಂಡೆ, ಜೆಮಿಮ್ಹಾ ರೋಡ್ರಿಗಸ್, ದೀಪ್ತಿ ಶರ್ಮ.


ಗ್ರೇಡ್ ಸಿ(10 ಲಕ್ಷ ರೂ): ವೇದಾ ಕೃಷ್ಣಮೂರ್ತಿ, ಪೂನಂ ರಾವತ್, ಅನುಜ ಪಾಟೀಲ್, ಮಾನ್ಸಿ ಜೋಶಿ, ಡಿ ಹೇಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕ್ ವಾಡ್, ಪೂಜಾ ವಸ್ತ್ರಕರ್, ಹರ್ಲೀನ್ ಡಿಯೊಲ್, ಪ್ರಿಯಾ ಪುನಿಯಾ, ಶಫಾಲಿ ವರ್ಮ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com