ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ನಾಡಕರ್ಣಿ ವಿಧಿವಶ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಮೇಡಿನ್ ಓವರ್ ಮಾಡಿದ ಖ್ಯಾತಿಗೆ ಭಾಜನರಾಗಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ಬಾಪು ನಾಡಕರ್ಣಿ ಅವರು ವಿಧಿವಶರಾಗಿದ್ದಾರೆ.

Published: 18th January 2020 01:05 AM  |   Last Updated: 18th January 2020 01:05 AM   |  A+A-


Bapu Nadkarni

ಬಾಪು ನಾಡಕರ್ಣಿ

Posted By : Vishwanath S
Source : Online Desk

ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಸತತ 21 ಮೇಡಿನ್ ಓವರ್ ಮಾಡಿದ ಖ್ಯಾತಿಗೆ ಭಾಜನರಾಗಿದ್ದ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಬಾಪು ಬಾಪು ನಾಡಕರ್ಣಿ ಅವರು ವಿಧಿವಶರಾಗಿದ್ದಾರೆ.

86 ವರ್ಷದ ಬಾಪು ನಾಡಕರ್ಣಿ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಬಾಪು ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬಾಪು ಸಾವಿನ ಕುರಿತು ಅಳಿಯ ವಿಜಯ್ ಖಾರೆ ಮಾಹಿತಿ ನೀಡಿದ್ದಾರೆ. 

ಎಡಗೈ ಬ್ಯಾಟ್ಸ್ ಮನ್ ಮತ್ತು ಬೌಲರ್ ಆಗಿರುವ ಬಾಪು ಅವರು 41 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟಾರೆ 1414 ರನ್ ಬಾರಿಸಿದ್ದ ಬಾಪು 88 ವಿಕೆಟ್ ಗಳನ್ನು ಪಡೆದಿದ್ದಾರೆ. 43 ರನ್ ಗೆ 6 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp