ಭಾರತ ಟೆಸ್ಟ್‌ ತಂಡಕ್ಕೂ ಕನ್ನಡಿಗ ಕೆಎಲ್ ರಾಹುಲ್ ಕಮ್‌ಬ್ಯಾಕ್?

ಸೀಮಿತ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲೂ  ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆದಿರುವ ಕನ್ನಡಿಗ ಕೆ.ಎಲ್ ರಾಹುಲ್ ಇದೀಗ ಟೆಸ್ಟ್‌  ತಂಡಕ್ಕೂ ಮರಳುವ ಹಾದಿಯಲ್ಲಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್

ಬೆಂಗಳೂರು: ಸೀಮಿತ ಓವರ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲೂ  ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆದಿರುವ ಕನ್ನಡಿಗ ಕೆ.ಎಲ್ ರಾಹುಲ್ ಇದೀಗ ಟೆಸ್ಟ್‌  ತಂಡಕ್ಕೂ ಮರಳುವ ಹಾದಿಯಲ್ಲಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಗೆ ಮರಳುವ ಸಾಧ್ಯತೆ ದಟ್ಟವಾಗಿದೆ.

ಟಿ-20 ಹಾಗೂ ಏಕದಿನ ಮಾದರಿಯಲ್ಲಿ ಭಾರತದ ಪರ ಅತ್ಯಂತ ಸ್ಥಿರ ಪ್ರದರ್ಶನದ ಆಟಗಾರರಾಗಿ ರಾಹುಲ್ ಇದೀಗ ಹೊರ ಹೊಮ್ಮಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಅವರು ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. 

ರಾಹುಲ್ ಪರ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ದು, ‘‘ಪ್ರಸ್ತುತ ಅದ್ಭುತ ಲಯದಲ್ಲಿರುವ ಕೆ.ಎಲ್ ಅವರನ್ನು ಯಾವುದೇ ತಂಡದಿಂದ ಹೊರಗಿಡಲು ಸಾಧ್ಯವಿಲ್ಲ. ಅವರೊಬ್ಬ ಬಹುಮುಖ ಪ್ರತಿಭೆ. ಕಳೆದ ತವರು ಸರಣಿಗೆ ಮೀಸಲು ಆರಂಭಿಕರಾಗಿದ್ದ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಅವರಿಗಿಂತ ರಾಹುಲ್ ಅತ್ಯುತ್ತಮ ಆಯ್ಕೆ,’’ ಎಂದು ಹೇಳಿದ್ದಾರೆ.

ಮುಂದಿನ ಟೆಸ್ಟ್‌ ತಂಡದಲ್ಲಿ ಮತ್ತೊಂದು ಬದಲಾವಣೆ ಎಂದರೆ, ಯುವ ವೇಗಿ ನವದೀಪ್ ಸೈನಿ ಅವರಿಗೆ  ಹೆಚ್ಚುವರಿ ವೇಗಿಯಾಗಿ ಹಾಗೂ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ಬಳಿಕ ಮೂರನೇ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗಾಗಿ ಸೀಮಿತ ಓವರ್‌ಗಳಿಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಕಾಯುತ್ತಿದೆ. ಒಂದು ವೇಳೆ ಹಾರ್ದಿಕ್ ಅಲಭ್ಯರಾದರೆ, ಮುಂಬೈನ ಸೂರ್ಯ ಕುಮಾರ್ ಅವರಿಗೆ ಏಕದಿನ ಸರಣಿಗೆ ಅವಕಾಶ ನೀಡಬಹುದು.

ಇತ್ತೀಚೆಗೆ ತನ್ನ ಮಹತ್ವ ಕಳೆದುಕೊಳ್ಳುತ್ತಿರುವ ಕೇದಾರ್ ಜಾಧವ್ ಅವರ ಬದಲು ಅಜಿಂಕ್ಯಾ ರಹಾನೆ ಅವರನ್ನು ಏಕದಿನ ಸರಣಿಗೆ ಕರೆ ತರುವ ಸಾಧ್ಯತೆ. ಜಾಧವ್ ಅವರಿಗಿಂತ ಅತ್ಯುತ್ತಮ ಬ್ಯಾಟಿಂಗ್ ತಂತ್ರಗಾರಿಕೆ ಹೊಂದಿರುವ ರಹಾನೆ ಅಥವಾ ಸೂರ್ಯ ಕುಮಾರ್ ಯಾದವ್ ಅವರಲ್ಲಿ ಒಬ್ಬರಿಗೆ ಮ ಹಾಕುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com