ರೋ'ಹಿಟ್' ಅಬ್ಬರದ ಶತಕ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

ಅದ್ಭುತ ಶತಕ ಸಿಡಿಸಿದ ರೋಹಿತ್ ಶರ್ಮಾ ಹಾಗೂ ನಾಯಕ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳುರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳ ದ್ಭುತ ಜಯ ಸಾಧಿಸಿದೆ. ಈ ಮೂಲಕ ವರ್ಷದ ಮೊದಲ ಏಕದಿನ ಸರಣಿಯನ್ನು ಗೆದ್ದಿದೆ. 
ರೋ'ಹಿಟ್' ಅಬ್ಬರದ ಶತಕ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ
ರೋ'ಹಿಟ್' ಅಬ್ಬರದ ಶತಕ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

ಬೆಂಗಳೂರು: ಅದ್ಭುತ ಶತಕ ಸಿಡಿಸಿದ ರೋಹಿತ್ ಶರ್ಮಾ ಹಾಗೂ ನಾಯಕ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳುರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಏಳು ವಿಕೆಟ್ ಗಳ ದ್ಭುತ ಜಯ ಸಾಧಿಸಿದೆ. ಈ ಮೂಲಕ ವರ್ಷದ ಮೊದಲ ಏಕದಿನ ಸರಣಿಯನ್ನು ಗೆದ್ದಿದೆ. 

ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ (119)  ನಾಯಕ ವಿರಾಟ್ ಕೊಹ್ಲಿ 89 ರನ್ ಗಳಿಸಿ ಭಾರತದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ. ಗೆಲ್ಲಲು 287 ರನ್‌ಗಳ` ಗುರಿ ಬೆನ್ನತ್ತಿದ ಟೀಂ ಇಂಡಿಯಾ 15 ಎಸೆತ ಬಾಕಿ ಇರುವಂತೆಯೇ ಜಯದ ಮಾಲೆ ದಕ್ಕಿಸಿಕೊಂಡಿದೆ.

ಕಡೆಯಲ್ಲಿ ಅಜೇಯ 44 ರನ್ ಗಳಿಸಿದ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ (8) ಭಾರತದ ಗೆಲುವಿನ ಅಭಿಯಾನ ಪೂರ್ಣಗೊಳಿಸಿದ್ದಾರೆ.

ಇದಕ್ಕೆ ಮೊದಲು ಅಸೀಸ್ ಆಟಗಾರ ಸ್ಟೀವ್ ಸ್ಮಿತ್ (131) ಶತಕ ಬಾರಿಸಿ ಆಸ್ಟ್ರೇಲಿಯಾ ಒಂಬತ್ತು ವಿಕೆಟ್‌ಗೆ 286 ರನ್ ಸವಾಲಿನ ಮೊತ್ತ ಪೇರಿಸಲು ಕಾರಣವಾದರು.ತಮ್ಮ ಒಂಬತ್ತನೇ ಏಕದಿನ ಶತಕವನ್ನು ಗಳಿಸಿದ ಸ್ಮಿತ್ ಅವರಲ್ಲದೆ, ಯುವ ಮಾರ್ನಸ್ ಲ್ಯಾಬುಸ್ಚಾಗ್ನೆ (54) ಕೂಡ ಮಹತ್ವದ ಪ್ರದರ್ಶನ ನೀಡಿದ್ದರು.

ಭಾರತ ಪರ, ವೇಗಿ ಮೊಹಮ್ಮದ್ ಶಮಿ (4/63) ಮತ್ತು ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ (2/44)  ಮಹತ್ವದ ವಿಕೆಟ್ ಪಡೆದು ಮಿಂಚಿದ್ದಾರೆ.

ಸಂಕ್ಷಿಪ್ತ ಸ್ಕೋರ್
 ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ಕ್ಕೆ 286.
(ಎಸ್ ಸ್ಮಿತ್ 131, ಎಂ ಲಾಬುಸ್ಚಾಗ್ನೆ 54; ಎಂ ಶಮಿ 4/63, ಆರ್ ಜಡೇಜಾ 2/44).

ಭಾರತ: 47.3 ಓವರ್‌ಗಳಲ್ಲಿ 3 ಕ್ಕೆ 289.
(ಆರ್ ಶರ್ಮಾ 119, ವಿ ಕೊಹ್ಲಿ 89; ಎ ಅಗರ್ 1/38, ಎ ಜಂಪಾ 1/44).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com