ಸ್ಮಿತ್ ರನೌಟ್ ಮಿಸ್, ಫಿಂಚ್ ರನೌಟ್ ಮಾಡಿದ ಶಮಿ, ಸ್ಮಿತ್ ನತ್ತ ಗುರಾಯಿಸಿದ ಫಿಂಚ್, ವಿಡಿಯೋ ವೈರಲ್!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸಾಂಘಿಕ ಪ್ರದರ್ಶನ ನೀಡುತ್ತಿದ್ದಾರೆ. ಆಸೀಸ್ ಬ್ಯಾಟ್ಸ್ ಮನ್ಗಳಾದ ಸ್ಮಿತ್ ಮತ್ತು ಫಿಂಚ್ ನಡುವೆ ಸಮನ್ವಯತೆ ಮಿಸ್ ಆಗಿದ್ದರಿಂದ ರನೌಟ್ ಆಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸ್ಮಿತ್-ಫಿಂಚ್
ಸ್ಮಿತ್-ಫಿಂಚ್

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸಾಂಘಿಕ ಪ್ರದರ್ಶನ ನೀಡುತ್ತಿದ್ದಾರೆ. ಆಸೀಸ್ ಬ್ಯಾಟ್ಸ್ ಮನ್ಗಳಾದ ಸ್ಮಿತ್ ಮತ್ತು ಫಿಂಚ್ ನಡುವಿನ ಗೊಂದಲದಿಂದಾಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ನಿರ್ಣಾಯಕ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೊದಲಿಗೆ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದೆ. ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಸ್ಮಿತ್ ಕವರ್ಸ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಒಂದು ರನ್ ತೆಗೆದುಕೊಳ್ಳುವಲ್ಲಿ ಇಬ್ಬರ ನಡುವೆ ಗೊಂದಲ ಉಂಟಾಗಿ ಫಿಂಚ್ ರನೌಟ್ ಆಗಿದ್ದಾರೆ. 

ಕವರ್ಸ್ ನಲ್ಲಿದ್ದ ಜಡೇಜಾ ಚೆಂಡನ್ನು ಸ್ಟ್ರೈಕ್ ನಲ್ಲಿದ್ದ ವಿಕೆಟ್ ಗೆ ಹೊಡೆದರು ಆದರೆ ಚೆಂಡು ಮಿಸ್ ಆಗಿ ಚಹಾಲ್ ಕೈ ಸೇರಿತ್ತು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಫಿಂಚ್ ಸ್ಟ್ರೈಕ್ ನತ್ತ ಓಡುತ್ತಿದ್ದರು. ಈ ವೇಳೆ ಸ್ಮಿತ್ ರನ್ ಬೇಡ ಎಂದು ಹಿಂದಕ್ಕೆ ಹೋದರು. ಅಷ್ಟರಲ್ಲಿ ಚಹಾಲ್ ಚೆಂಡನ್ನು ನಾನ್ ಸ್ಟ್ರೈಕ್ ನಲ್ಲಿದ್ದ ಬೌಲರ್ ಮೊಹಮ್ಮದ್ ಶಮಿಗೆ ಎಸೆದರು. ಶಮಿ ಸುಲಭವಾಗಿ ರನೌಟ್ ಮಾಡಿದರು. 

ಈ ವೇಳೆ ಫಿಂಚ್ ಆಕ್ರೋಶಗೊಂಡು ಸ್ಮಿತ್ ರನ್ನು ಗುರಾಯಿಸಿಕೊಂಡು ಹೋಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com