ರಿಕಿ ಪಾಂಟಿಂಗ್ ಭವಿಷ್ಯವನ್ನೇ ಉಲ್ಟಾ ಮಾಡಿದ್ದೇಗೆ ಕೊಹ್ಲಿ ಪಡೆ!

ಆಸ್ಟ್ರೇಲಿಯಾದ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಟೀಂ ಇಂಡಿಯಾ ಸಾಮರ್ಥ್ಯವನ್ನು ಹೀಯಾಳಿಸಿದ್ದರು. ಆಸೀಸ್ ವಿರುದ್ಧ ಟೀಂ ಇಂಡಿಯಾ ಮಕಾಡೆ ಮಲಗುತ್ತದೆ ಎಂದು ಹೇಳಿದ್ದ ಪಾಂಟಿಂಗ್ ಭವಿಷ್ಯವನ್ನೇ ವಿರಾಟ್ ಕೊಹ್ಲಿ ಪಡೆ ಉಲ್ಟಾ ಮಾಡಿದೆ.

Published: 20th January 2020 03:30 PM  |   Last Updated: 20th January 2020 03:30 PM   |  A+A-


ricky ponting-kohli

ರಿಕಿ ಪಾಂಟಿಂಗ್-ವಿರಾಟ್ ಕೊಹ್ಲಿ

Posted By : Vishwanath S
Source : Online Desk

ಆಸ್ಟ್ರೇಲಿಯಾದ ಸರಣಿಗೂ ಮುನ್ನ ರಿಕಿ ಪಾಂಟಿಂಗ್ ಟೀಂ ಇಂಡಿಯಾ ಸಾಮರ್ಥ್ಯವನ್ನು ಹೀಯಾಳಿಸಿದ್ದರು. ಆಸೀಸ್ ವಿರುದ್ಧ ಟೀಂ ಇಂಡಿಯಾ ಮಕಾಡೆ ಮಲಗುತ್ತದೆ ಎಂದು ಹೇಳಿದ್ದ ಪಾಂಟಿಂಗ್ ಭವಿಷ್ಯವನ್ನೇ ವಿರಾಟ್ ಕೊಹ್ಲಿ ಪಡೆ ಉಲ್ಟಾ ಮಾಡಿದೆ. 

ಪ್ರವಾಸಿ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಈ ಸರಣಿಗೂ ಮುನ್ನ ಪಾಂಟಿಂಗ್ ಕೆಲ ಅಂಕಿ-ಅಂಶಗಳನ್ನು ನೀಡಿ ಈ ಬಾರಿ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 2-1ರ ಅಂತರದಿಂದ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು. 

ಅದರಂತೆ ಮುಂಬೈನಲ್ಲಿ ಆಡಿದ್ದ ಮೊದಲ ಪಂದ್ಯ ಸಹ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿತ್ತು. ಈ ವೇಳೆ ಹಲವರು ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಸೋತು ವೈಟ್ ವಾಷ್ ಗೆ ಗುರಿಯಾಗಲಿದೆ ಎಂಬ ಮಾತುಗಳು ಕೇಳಿಬಂದಿತ್ತು. 

ಆದರೆ ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿ ಎರಡು ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇದೇ ವೇಳೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಮಣಿಸುವ ಮೂಲಕ ಜಗತ್ತಿಗೆ ಟೀಂ ಇಂಡಿಯಾದ ಸಾಮರ್ಥ್ಯವನ್ನು ತೋರಿಸಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp