ಸಿಂಗಲ್ ರನ್‌ಗಾಗಿ ಬ್ಯಾಟ್ಸ್‌ಮನ್‌-ಬೌಲರ್ ನಡುವೆ ಭೀಕರ ಡಿಕ್ಕಿ, ವಿಡಿಯೋ ವೈರಲ್!

ಕ್ರಿಕೆಟ್ ನಲ್ಲಿ ಒಂದೊಂದು ರನ್ ಸಹ ಪ್ರಮುಖ ಪಾತ್ರವಹಿಸುತ್ತದೆ. ಅದೇ ರೀತಿ ಬ್ಯಾಟ್ಸ್‌ಮನ್‌ ಸಿಂಗಲ್ ರನ್ ತೆಗೆದುಕೊಳ್ಳುವ ವೇಳೆ ಬೌಲರ್ ಗೆ ಭೀಕರವಾಗಿ ಗುದ್ದಿಕೊಂಡಿದ್ದಾರೆ. ಈ ವೇಳೆ ಬ್ಯಾಟ್ಸ್ ಮನ್ ತಲೆ ನೆಲಕ್ಕೆ ತಾಗಿದ್ದು ಅದೃಷ್ಟವಶಾತ್ ದೊಡ್ಡ ಗಂಡಾಂತರ ತಪ್ಪಿದೆ.

Published: 21st January 2020 07:25 PM  |   Last Updated: 21st January 2020 07:25 PM   |  A+A-


Posted By : Vishwanath S
Source : Online Desk

ಮೆಲ್ಬರ್ನ್: ಕ್ರಿಕೆಟ್ ನಲ್ಲಿ ಒಂದೊಂದು ರನ್ ಸಹ ಪ್ರಮುಖ ಪಾತ್ರವಹಿಸುತ್ತದೆ. ಅದೇ ರೀತಿ ಬ್ಯಾಟ್ಸ್‌ಮನ್‌ ಸಿಂಗಲ್ ರನ್ ತೆಗೆದುಕೊಳ್ಳುವ ವೇಳೆ ಬೌಲರ್ ಗೆ ಭೀಕರವಾಗಿ ಗುದ್ದಿಕೊಂಡಿದ್ದಾರೆ. ಈ ವೇಳೆ ಬ್ಯಾಟ್ಸ್ ಮನ್ ತಲೆ ನೆಲಕ್ಕೆ ತಾಗಿದ್ದು ಅದೃಷ್ಟವಶಾತ್ ದೊಡ್ಡ ಗಂಡಾಂತರ ತಪ್ಪಿದೆ.

ಬಿಗ್ ಬಾಶ್ ಲೀಗ್ ನಲ್ಲಿ ಸ್ಯಾಮ್ ಹಾರ್ಪರ್ ಮತ್ತು ನಾಥನ್ ಇಲ್ಲಿಸ್ ಗುದ್ದಿಕೊಂಡಿದ್ದಾರೆ. ಹಾರ್ಪರ್ ಆಫ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಸಿಂಗಲ್ ರನ್ ತೆಗೆದುಕೊಳ್ಳುವಾಗ ನಾನ್ ಸ್ಟ್ರೈಕ್ ನಲ್ಲಿದ್ದ ಬೌಲರ್ ಗೆ ಹಾರ್ಪರ್ ಗುದ್ದಿದ್ದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ತಲೆ ನೆಲಕ್ಕೆ ತಾಗಿದ್ದರಿಂದ ಅವರು ತಲೆಯನ್ನು ಹಿಡಿದುಕೊಂಡು ನೆಲದ ಮೇಲೆ ಬಿದ್ದಿದ್ದರು. 

ಈ ಪಂದ್ಯದಲ್ಲಿ ಹೊಬರ್ಟ್ ಹರ್ರಿಕೇನ್ಸ್ ತಂಡ ಮೆಲ್ಬರ್ನ್ ರೆನೆಗೇಡ್ಸ್ ವಿರುದ್ಧ 4 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp