ಆಸೀಸ್ ಬುಷ್ ಫೈರ್ ಚಾರಿಟಿ ಪಂದ್ಯಕ್ಕೆ  ಸಚಿನ್ ತೆಂಡೊಲ್ಕರ್ , ಕರ್ಟ್ನಿ ವಾಲ್ಷ್ ಕೋಚ್ 

ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ತರಿಗೆ ಪರಿಹಾರ ಸಂಗ್ರಹ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಬುಷ್ ಪೈರ್ ಚಾರಿಟಿ  ಪಂದ್ಯದ ತರಬೇತುದಾರರಾಗಿ ಸಚಿನ್ ತೆಂಡೊಲ್ಕರ್ ಹಾಗೂ  ಕರ್ಟ್ನಿ ವಾಲ್ಷ್ ಕೋಚ್ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ಇಂದು ತಿಳಿಸಿದ್ದಾರೆ.
ಸಚಿನ್ ತೆಂಡೊಲ್ಕರ್,  ಕರ್ಟ್ನಿ ವಾಲ್ಷ್
ಸಚಿನ್ ತೆಂಡೊಲ್ಕರ್, ಕರ್ಟ್ನಿ ವಾಲ್ಷ್

ಸಿಡ್ನಿ: ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ತರಿಗೆ ಪರಿಹಾರ ಸಂಗ್ರಹ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಬುಷ್ ಪೈರ್ ಚಾರಿಟಿ  ಪಂದ್ಯದ ತರಬೇತುದಾರರಾಗಿ ಸಚಿನ್ ತೆಂಡೊಲ್ಕರ್ ಹಾಗೂ  ಕರ್ಟ್ನಿ ವಾಲ್ಷ್ ಕೋಚ್ ಆಯ್ಕೆಯಾಗಿದ್ದಾರೆ ಎಂದು ಆಯೋಜಕರು ಇಂದು ತಿಳಿಸಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರರಾದ ಅಡಂ ಗಿಲ್ ಕ್ರಿಸ್ಟ್, ಬ್ರೆಟ್ಲಿ, ಮೈಕೇಲ್ ಕ್ಲರ್ಕ್ , ಶೇನ್ ವ್ಯಾಟ್ಸನ್  ಮತ್ತಿತರರು ಈ ಪಂದ್ಯದಲ್ಲಿ ಆಡಲಿದ್ದಾರೆ. 

ಶೇನ್ ವಾರ್ನ್ ಹಾಗೂ ರಿಕಿ ಪಾಟಿಂಗ್ ನಾಯಕರಾಗಿರುವ ತಂಡಗಳಿಗೆ ಭಾರತದ ಸಚಿನ್ ತೆಂಡೊಲ್ಕರ್ ಹಾಗೂ ವೆಸ್ಟ್ ಇಂಡೀಸ್ ವೇಗಿ ವಾಲ್ಸಾ ತರಬೇತುದಾರರಾಗಲಿದ್ದಾರೆ. ಸ್ಟೀವ್ ವ್ಹಾ ಮತ್ತು ಕೋಚ್ ಜಸ್ಟಿನ್ ಲಾಂಗರ್ ಕೂಡಾ ಮೈದಾನದ ಹೊರಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಆಸ್ಟ್ರೇಲಿಯಾಕ್ಕೆ ಬರಲಿರುವ ಸಚಿನ್ ತೆಂಡೊಲ್ಕರ್ ಹಾಗೂ ವಾಲ್ಸಾ ಅವರನ್ನು ಗೌರವದಿಂದ ಸ್ವಾಗತಿಸಲಾಗುವುದು ಎಂದು  ಆಸ್ಟ್ರೇಲಿಯಾ ಕ್ರಿಕೆಟ್ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ತಿಳಿಸಿದ್ದಾರೆ.

ಫೆಬ್ರವರಿ 8 ರಂದು ಬಿಗ್ ಬಾಗ್ ಲೀಗ್ ಫೈನಲ್ ಪಂದ್ಯ ನಡೆಯಲಿದ್ದು. ಇಲ್ಲಿ ಸಂಗ್ರಹವಾದ ನಿಧಿಯನ್ನು ಆಸ್ಟ್ರೇಲಿಯಾದ ರೆಡ್ ಕ್ರಾಸ್ ಸಂಸ್ಥೆಗೆ ನೀಡಲಾಗುತ್ತದೆ. 

ಕಾಳ್ಗಿಚ್ಚಿನಿಂದ ಮನೆ ಮಠ ಕಳೆದುಕೊಂಡವರಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ನಿಂದ 2 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ನೀಡಲಾಗುತ್ತಿದೆ. 

ಈ ತಿಂಗಳ ಆರಂಭದಲ್ಲಿ ವಾರ್ನ್ ಚೊಚ್ಚಲ ಟೆಸ್ಟ್ ಪಂದ್ಯಕ್ಕಾಗಿ ಪಡೆದಿದ್ದ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿನಿಂದ ಬಂದಿದ್ದ   7 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹಣವನ್ನು ಸಂತ್ರಸ್ತರಿಗೆ ನೀಡಿದ್ದರು. 

ಟೆನ್ನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್  ಡಬ್ಲ್ಯೂಟಿಎ  ಅಕ್ಲಂಡ್ ಕ್ಲಾಸಿಕ್  ವಿನರ್ಸ್ ನಲ್ಲಿ ಗೆದ್ದ 43 ಸಾವಿರ ಅಮೆರಿಕನ್ ಡಾಲರ್ ನ್ನು ಪರಿಹಾರವಾಗಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com