ನ್ಯೂಜಿಲೆಂಡ್ ವಿರುದ್ಧ ಟಿ-20, ಏಕದಿನ ಸರಣಿಯಿಂದ ಶಿಖರ್ ಧವನ್ ಔಟ್ !

Published: 21st January 2020 02:09 PM  |   Last Updated: 21st January 2020 02:11 PM   |  A+A-


Shoulder injury rules Shikhar Dhawan out of New Zealand T20Is

ನ್ಯೂಜಿಲೆಂಡ್ ವಿರುದ್ಧ ಟಿ-20, ಏಕದಿನ ಸರಣಿಯಿಂದ ಶಿಖರ್ ಧವನ್ ಔಟ್ !

Posted By : Srinivas Rao BV
Source : UNI

ನವದೆಹಲಿ: ಭುಜದ ಗಾಯಕ್ಕೆ ತುತ್ತಾಗಿರುವ ಭಾರತ ತಂಡದ ಹಿರಿಯ ಆರಂಭಿಕ ಶಿಖರ್ ಧವನ್ ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಆದರೆ, ಇವರ ಸ್ಥಾನಕ್ಕೆ ಇನ್ನೂ ಯಾರನ್ನೂ ಬಿಸಿಸಿಐ ಗುರುತಿಸಿಲ್ಲ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಭಾನುವಾರ ಮೂರನೇ ಪಂದ್ಯದಲ್ಲಿ ಧವನ್ ಫೀಲ್ಡಿಂಗ್ ವೇಳೆ ಗಾಯಕ್ಕೆ ತುತ್ತಾಗಿದ್ದರು. ತಕ್ಷಣ ಅವರನ್ನು ತಂಡದ ಫಿಜಿಯೊ ಅಂಗಳದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಅವರನ್ನು ಎಕ್ಸ್ ರೆಗೆ ಕರೆದೊಯ್ಯಲಾಗಿತ್ತು.

ಸರಣಿ ನಿರ್ಣಾಯಕ ಪಂದ್ಯದ ಆಸ್ಟ್ರೇಲಿಯಾ ಇನಿಂಗ್ಸ್ ನ ಐದನೇ ಓವರ್ ನಲ್ಲಿ ಆ್ಯರೋನ್ ಫಿಂಚ್ ಹೊಡೆದಿದ್ದ ಚೆಂಡನ್ನು ಬೌಂಡರಿಯಿಂದ ತಡೆಯಲು ಧವನ್ ಬಿದ್ದು ತಮ್ಮ ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ನಂತರ, ಯಜುವೇಂದ್ರ ಚಾಹಲ್ ಧವನ್ ಬದಲು ಫೀಲ್ಡಿಂಗ್ ಮಾಡಿದ್ದರು. ಒಂದು ಕ್ಯಾಚ್ ಕೂಡ ಹಿಡಿದಿದ್ದರು. ಬ್ಯಾಟಿಂಗ್ ನಲ್ಲಿ ರೋಹಿತ್ ಜತೆ ರಾಹುಲ್ ಇನಿಂಗ್ಸ್ ಆರಂಭ ಮಾಡಿದ್ದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp