ನ್ಯೂಜಿಲೆಂಡ್ ಸರಣಿಯಿಂದ ಶಿಖರ್ ಧವನ್‌ ಔಟ್: ಟೀಂ ಇಂಡಿಯಾಗೆ ಬಲ ತುಂಬಲಿರುವ ಪೃಥ್ವಿ ಶಾ, ಸಂಜು!

ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಗೆ ಟೀಮ್ ಇಂಡಿಯಾವನ್ನು ಮಂಗಳವಾರ ಪ್ರಕಟಿಸಲಾಗಿದೆ. ಗಾಯಾಳು ಶಿಖರ್ ಧವನ್ ಅವರ ಬದಲಿಗೆ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಸ್ಥಾನ ಪಡೆದಿದ್ದಾರೆ.

Published: 22nd January 2020 06:10 PM  |   Last Updated: 22nd January 2020 06:12 PM   |  A+A-


Prithvi Shaw-Sanju Samson

ಪೃಥ್ವಿ ಶಾ-ಸಂಜು ಸ್ಯಾಮ್ಸನ್

Posted By : Vishwanath S
Source : UNI

ನವದೆಹಲಿ: ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ-20 ಸರಣಿಗೆ ಟೀಮ್ ಇಂಡಿಯಾವನ್ನು ಮಂಗಳವಾರ ಪ್ರಕಟಿಸಲಾಗಿದೆ. ಗಾಯಾಳು ಶಿಖರ್ ಧವನ್ ಅವರ ಬದಲಿಗೆ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಸ್ಥಾನ ಪಡೆದಿದ್ದಾರೆ.

ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಶಿಖರ್ ಧವನ್ ಬದಲಿಗೆ ಏಕದಿನ ಸರಣಿಗೆ ಪೃಥ್ವಿ ಶಾ ಆಯ್ಕೆ ಆದರೆ, ಟಿ-20 ಸರಣಿಗೆ ಸಂಜು ಸ್ಯಾಮ್ಸನ್ ಅವಕಾಶ ಪಡೆದಿದ್ದಾರೆ.

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟಿ20 ಪಂದ್ಯವನ್ನು ಅಕ್ಲೆಂಡ್ ನಲ್ಲಿ ಜ. 24 ರಂದು ಆಡಲಿದೆ. ಜ.26 ರಂದು ಎರಡನೇ ಹಾಗೂ ಐದನೇ ಹಾಗೂ ಕೊನೆಯ ಪಂದ್ಯ ಫೆ.2 ರಂದು ನಡೆಯಲಿದೆ.

ಭಾರತ ಟಿ20 ತಂಡ: 
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್(ವಿ.ಕೀ), ಶಿವಂ ದುಬೆ, ಕುಲ್ದೀಪ್ ಯಾದವ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್.

Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp